ಕೊಪ್ಪಳ ಹಜ್ರತ್ ಸೈಯ್ಯದ್ ಷಾಹ್ ಪೀರ್ ಪಾಷಾ ಖಾದ್ರಿ ರವರ ನಾಳೆ ಉರುಸ್

ಕೊಪ್ಪಳ : ಜ.೫.ಪ್ರತಿವರ್ಷದಂತೆ ಈ ವರ್ಷವು ಸಹ ಕೊಪ್ಪಳ ನಗರದ ಸಾಲರಜಂಗ ರಸ್ತೆಯಲ್ಲಿನ ಪಲ್ಟನ್ ಓಣಿಯ ಮಸುತಿಯ ಹತ್ತಿರದಲ್ಲಿರುವ ಹಜ್ರತ್ ಸೈಯ್ಯದ್ ಷಾಹ್ ಪೀರ್ ಪಾಷಾ ಖಾದ್ರಿ ರವರ ಉರುಸ್ ಕಾರ್ಯಕ್ರಮ ನಡೆಯಲಿದೆ. 
ಪೀರೆ ತರೀಖತ್ ಹಜ್ರತ್ ಅಲ್‌ಹಾಜ್ ಮೌಲಾನಾ ಸೂಫಿ ಮುಹಮ್ಮದ್ ಬಕ್ಷಿ ಸಾಬ ತಕ್ಷಿನ್ ಷಾಹ್ ನಕ್ಷಬಂದಿ-ಉಲ್-ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಸದರಿ ಉರುಸು ಕಾರ್ಯಕ್ರಮ ಜರಗುತ್ತದೆ. ಗಂದ : ದಿನಾಂಕ ೦೬-೦೧-೨೦೧೫ ಮಂಗಳವಾರ ಸಾಯಂಕಾಲ ೦೮-೦೦ ಕ್ಕೆ, ಉರುಸು : ದಿನಾಂಕ ೦೭-೦೧-೨೦೧೫ ಬುಧುವಾರ ರಾತ್ರಿ ೦೯-೦೦
ಜಿಯಾರತ್  : ದಿನಾಂಕ ೦೮-೦೧-೨೦೧೫ ರಂದು ಬೆಳಿಗ್ಗೆ ೦೬-೦೦ ಕ್ಕೆ  
ಹಾಗೂ ಲಂಗರ್ ( ಅನ್ನ ಸಂತರ್ಪಣೆ ಹಾಗೂ ಪ್ರವಾದಿ ಸ್ವಲ್ಲ್ಲಾಹಿ ಅಲೈಹಿ ವಸಲ್ಲಮರ ಪವಿತ್ರ ಕೇಶದರ್ಶನ ಕಾರ್ಯಕ್ರಮಗಳು ಜರುಗುವವು. 
ಸದರಿ ಕಾರ್ಯಕ್ರಮಕ್ಕೆ ಧಾರ್ಮಿಕ ಉಲಾಮಗಳು, ಪುಷಾಯಿಖ್ಗಳಾದ ಅಲ್ಲಾಮಾ ಮೌಲಾನಾ ಮುಫ್ತಿ ಮುಹಮ್ಮದ್ ನಜೀರ್ ಅಹೇಮ್ಮದ್ ಬೆಳಗಾವಿಯ ಪೊಲೀಸ ಹೆಡ್ ಕೌಟ್ರೇಸ್ ಹತ್ತಿರದ ಮಸಿದಿಯ ಅಲ್ಲಮಾ ಮೌಲಾನಾ ಹಾಫಿಜ್ ಮುಹಮ್ಮದ್ ನಜೀರ್ ಉಲ್ಲಾ, ಹೈದ್ರಾಬಾದಿನ ಅಲ್ಲಮಾ ಮೌಲಾನಾ ಹಾಫಿಜ್ ಮುಹಮ್ಮದ ಆದಿಲ್, ಅಲ್ಲಮಾ ಅಲ್ಲಮಾ ಮೌಲಾನಾ ಹಾಫಿಜ್ ಮುಹಮ್ಮದ ಮುಸ್ತಫಾ ಅಹ್ಮದ್ ಕಮಲ್,  ಮುಂತಾದವರು ಭಾಗವಹಿಸುವರೆಂದು ಹಜ್ರತ್ ಸೈಯ್ಯದ್ ಷಾಹ್ ಪೀರ್ ಪಾಷಾ ಖಾದ್ರಿ ದರ್ಗಾದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಸೈಯ್ಯದ್ ನೂರುಲ್ಲಾ ಖಾದ್ರಿ  ತಿಳಿಸಿದ್ದಾರೆ. 

Leave a Reply