ಹೈ-ಕ ಜಿಲ್ಲೆಗಳ ಉತ್ತಮ ವಿಜ್ಞಾನ ಶಿಕ್ಷಕರಿಗೆ ಸನ್ಮಾನ

 : ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ರಾಯಚೂರು ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹೈದ್ರಾಬಾದ ಕರ್ನಾಟಕದ ೬ ಜಿಲ್ಲೆಗಳ ಅತ್ಯುತ್ತಮ ವಿಜ್ಞಾನ ಶಿಕ್ಷಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಫೆ.೨೮ ರಂದು ಹಮ್ಮಿಕೊಳ್ಳಲಾಗಿದ್ದು, ಆಸಕ್ತಿಯುಳ್ಳ ಶಿಕ್ಷಕರು ತಮ್ಮ ಸ್ವ-ವಿವರಗಳೊಂದಿಗೆ ಫೆ.೨೦ ರೊಳಗಾಗಿ ಸಲ್ಲಿಸಬಹುದಾಗಿದೆ. 
ಆಸಕ್ತ ಶಿಕ್ಷಕರು ತಾವು ಕೈಗೊಂಡ ಕಾರ್ಯಕ್ರಮಗಳು, ಬರೆದ ಪುಸ್ತಕಗಳು, ಲೇಖನಗಳು, ಭಾಗವಹಿಸಿದ ಸೆಮಿನಾರ್‌ಗಳು, ಕಾರ್ಯಕ್ರಮಗಳು ಇತ್ಯಾದಿಗಳಿಗೆ ಸಂಬಂಧಿಸಿದ ಫೋಟೋ, ಸುದ್ದಿ ತುಣುಕು, ಪ್ರಮಾಣ ಪತ್ರ, ಪುಸ್ತಕ ಮುಂತಾದವುಗಳನ್ನು  ಆಯಾ ಶಾಲೆಯ ಮುಖ್ಯೋಪಾಧ್ಯಾಯರು/ಪ್ರಾಚಾರ್ಯರ ದೃಢೀಕರಣದೊಂದಿಗೆ ಪ್ರೊ. ಸಿ.ಡಿ.ಪಾಟೀಲ್, ನಂ. ೬-೨-೬೮/೧೦೨, ಡಾ.ಅಮರಖೇಡ ಬಡಾವಣೆ, ರಾಯಚೂರು-೫೮೪೧೦೩ ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ ಮೊ.೦೯೪೪೮೪೨೭೫೮೫ ಸಂಪರ್ಕಿಸಬಹುದಾಗಿದೆ .
Please follow and like us:
error