You are here
Home > Koppal News > ನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಕೊಪ್ಪಳ : ಪೊಲೀಸ್ ಧ್ವಜ ದಿನಾಚರಣೆ ನಿಮಿತ್ಯ  ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ನಿವೃತ್ತ ಸಶಸ್ತ್ರ ಆರಕ್ಷಕ ಉಪನಿರೀಕ್ಷಕ ಗೌರವ ವಂದನೆ ಸ್ವೀಕರಿಸಿದರು.  ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಸ್.ರಾಜಾ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಧ್ವಜ ದಿನಾಚರಣೆ ನಿಮಿತ್ಯ ಆರೋಗ್ಯ ತಪಾಸಣೆ ಕಾರ‍್ಯಕ್ರಮ ಹಾಗೂ ಸನ್ಮಾನ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಅಂದಪ್ಪ ಅಗಡಿ, ಶಾಂತಣ್ಣ ಮುದಗಲ್, ಪೀರಾ ಹುಸೇನ್ ಹೊಸಳ್ಳಿ, ರಾಘವೇಂದ್ರ ಪಾನಘಂಟಿ ಸೇರಿದಂತೆ ನಗರದ ವಿವಿಧ ಗಣ್ಯರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Leave a Reply

Top