ಎಂ.ಟೆಕ್ ; ಸುಷ್ಮಾ ಭಾವಿಕಟ್ಟಿಗೆ ೩ನೇ ರ‍್ಯಾಂಕ್

ಕೊಪ್ಪಳ,  : ಕೊಪ್ಪಳದ ಪ್ರತಿಭಾವಂತ ವಿದ್ಯಾರ್ಥಿನಿ ಸುಷ್ಮಾ ಭಾವಿಕಟ್ಟಿ ಎಂ.ಟೆಕ್.ಸ್ನಾತಕೋತ್ತರ ಪದವಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ  ಮೂರನೇ ರ‍್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ.
ದಾವಣಗೆರೆಯ ಬಾಪೂಜಿ ತಾಂತ್ರಿಕ ಮತ್ತು ಇಂಜನೀಯರಿಂಗ್ ಮಹಾವಿದ್ಯಾಲಯದ ಜವಳಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಎಂ.ಟೆಕ್.ವ್ಯಾಸಂಗ ಮಾಡುತ್ತಿದ್ದ ಸುಷ್ಮಾ ಭಾವಿಕಟ್ಟಿ ಶೇ.೮೦.೫೦ ಅಂಕಗಳನ್ನು ಗಳಿಸಿ ವಿ.ವಿ.ಗೆ ಮೂರನೇ ರ‍್ಯಾಂಕ ಗಳಿಸಿದ್ದಾರೆ. ಎಂ.ಟೆಕ್. ಸ್ನಾತಕೋತ್ತರ ಪದವಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಅತಿ ಹೆಚ್ಚು ಅಂಕಗಳಿಸಿದ ಕೇವಲ ಮೂವರಿಗೆ ಮಾತ್ರ ರ‍್ಯಾಂಕುಗಳನ್ನು ನೀಡುತ್ತದೆ.
ರ‍್ಯಾಂಕ್ ವಿಜೇತೆ ಸುಷ್ಮಾ, ಕೊಪ್ಪಳದ ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ನೀಲಪ್ಪ ಹಾಗೂ ನಗರಸಭೆ ಮಾಜಿ ಸದಸ್ಯೆ ಇಂದಿರಾ ಭಾವಿಕಟ್ಟಿ ಅವರ ಮಗಳಾಗಿದ್ದಾರೆ. ಸುಷ್ಮಾ ಭಾವಿಕಟ್ಟಿಯ ಸಾಧನೆಗೆ ಕೊಪ್ಪಳ ಜಿಲ್ಲಾ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಎನ್.ಡೊಳ್ಳಿನ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.
Please follow and like us:
error