You are here
Home > Koppal News > ಐತಿಹಾಸಿಕ ಮಂಟಪ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸಿ -ಡಾ.ನಾಗರಾಜ್

ಐತಿಹಾಸಿಕ ಮಂಟಪ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸಿ -ಡಾ.ನಾಗರಾಜ್

ಹೊಸಪೇಟೆ: ಇತಿಹಾಸವನ್ನು ತಿಳಿಯಬೇಕಾದರೆ ಇರುವ ಐತಿಹಾಸಿಕ ಮಂಟಪಗಳನ್ನು ಮತ್ತು ಪುರಾತನ ಕಾಲದ ವಸ್ತುಗಳ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ನಗರದ ಚಿತ್ತವಾಡ್ಗಿಯ ಶ್ರೀ ಶಂಕರ್ ಆನಂದ್‌ಸಿಂಗ್ ಸರಕಾರಿ ಮೊದಲ ದರ್ಜೆ ಕಾಲೇಜ್‌ನ ಪ್ರಾಚಾರ್ಯ ಡಾ.ನಾಗರಾಜ್ ಹೇಳಿದರು. 
ನಗರದ ಚಿತ್ತವಾಡ್ಗಿಯ ಶಂಕರ್ ಆನಂದ್‌ಸಿಂಗ್ ಸರಕಾರಿ ಮೊದಲ ದರ್ಜೆ ಕಾಲೇಜ್ ಮತ್ತು ಮೈಸೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಜಂಟಿಯಾಗಿ ಶುಕ್ರವಾರ ಕಾಲೇಜ್‌ನಲ್ಲಿ ಆಯೋಜಿಸಿದ್ದ ಪರಂಪರಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.  
ವಿಜಯನಗರ ಸಾಮಾಜ್ರಯದ ಗತವೈಭವವನ್ನು ಸಾರುವ ಹಂಪಿಯ ಪಕ್ಕದಲ್ಲಿಯೇ ನಾವಿದ್ದೇವೆ. ಹಂಪಿಯ ಒಂದೊಂದು ಕಲ್ಲಿನ  ಬಂಡೆಗಳು ಸಹ ಒಂದೊಂದು ಇತಿಹಾಸವನ್ನು ಸಾರುತ್ತವೆ. ಇಂದು ನಮ್ಮ ಭಾಗದಲ್ಲಿ ಹೆಚ್ಚು ಪುರಾತನ ಕಾಲದ ದಾಖಲೆಗಳು ಮತ್ತು ಐಹಿತ್ಯಗಳು, ಕೋಟೆ, ಕೊತ್ತಲುಗಳು, ಸ್ಮಾರಕಗಳು ಇವೆ. ಇವುಗಳ ಅಧ್ಯಯನವು ಬಹುಮುಖ್ಯವಾಗಿದೆ. ಎಲ್ಲ ವಿಭಾಗದ ವಿದ್ಯಾರ್ಥಿಗಳು ಇತಿಹಾಸವನ್ನು ಅರಿಯಬೇಕಿದೆ. ಇತಿಹಾಸವನ್ನು ತಿಳಿಯಲಿಲ್ಲ  ಎಂದರೆ ನಾವು ಪರಿಪೂರ್ಣ ನಾಗರಿಕರಾಗಲು ಸಾಧ್ಯವಿಲ್ಲ ಎಂದರು. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ಪ್ರಾಚೀನ ಕಾಲದ ದೇಗುಲಗಳ ಸಂರಕ್ಷಣೆ ನಮ್ಮ ಹೊಣೆ ಎಂಬ ಹತ್ತು ಹಲವಾರು ಪೋಸ್ಟರ್‌ಗಳನ್ನು ಹೊತ್ತು ವಿದ್ಯಾರ್ಥಿಗಳು ನಗರದ ಅಂಬೇಡ್ಕರ್ ವೃತ್ತದ ಮೂಲಕ ರೋಟರಿ ವೃತ್ತದವರೆಗೆ ಜಾಗೃತಿ ರ‍್ಯಾಲಿ ಮಾಡಿದರು. ಕಾಲೇಜ್‌ನ ಪ್ರಾಧ್ಯಾಪಕರಾದ ಡಾ.ಕಡ್ಲಬಾಳು ಪನ್ನಂಗಧರ, ಡಾ.ಕನಕೇಶ್ ಮೂರ್ತಿ, ಗದ್ದಿಗೇಶ್, ಮುತಾಲೀಕ್‌ದೇಸಾಯಿ, ಸಿದ್ದಪ್ಪ, ಬಸವರಾಜ್, ರೂಪ, ವಾರುಣಿ, ಅಕ್ಕಿ ಬಸವರಾಜ್ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ, ಶಿಲ್ಪ, ಅಶ್ವಿನಿ, ರಂಗ, ರಾಜು ಮತ್ತಿತತರು ಹಾಜರಿದ್ದರು.

Leave a Reply

Top