ಗೌರಿ-ಗಣೇಶ ಹಬ್ಬ : ಆ. ೨೫ ರಂದು ಶಾಂತಿಪಾಲನಾ ಸಭೆ

ಕೊಪ್ಪಳ ಆ. ೨೩ (ಕ.ವಾ): ಗೌರಿ-ಗಣೇಶ ಹಬ್ಬವನ್ನು ಸೆ. ೦೧ ರಿಂದ ೦೫ ರವರೆಗೆ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಆ. ೨೫ ರಂದು ಮಧ್ಯಾಹ್ನ ೧೨ ಗಂಟೆಗೆ ಶಾಂತಿಪಾಲನಾ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಹಿಸುವರು, ಸಭೆಗೆ ಸಂಘ ಸಂಸ್ಥೆಗಳು, ಗಣ್ಯ ನಾಗರೀಕರು, ಗಣೇಶ ಮೂರ್ತಿ ಸ್ಥಾಪಿಸುವ ಮುಖಂಡರು, ಮಾಧ್ಯಮದವರು ಸಭೆಯಲ್ಲಿ ಭಾಗವಹಿಸುವಚಿತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply