ರಕ್ತದಾನ ಶಿಬಿರ ಹಾಗೂ ರಕ್ತ ನಿಧಿ(ಬ್ಲಡ್ ಬ್ಯಾಂಕ್) ಉದ್ಘಾಟನಾ ಸಮಾರಂಭ ಮುಂದೂಡಿಕೆ.

 ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬ್ಲಡ್ ಬ್ಯಾಂಕ್ ಉದ್ಘಾಟನಾ ಸಮಾರಂಭ ಹಾಗೂ ಬೃಹತ್ ರಕ್ತದಾನ ಶಿಬಿರದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ.  
      ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಗೊಳಿಸಿರುವದಾಗಿ ತಿಳಿಸಿದ್ದಾರೆ.
    ಸಂತಾಪ ಸಭೆ- ಹಿರಿಯ ಸಾಹಿತಿ ಹಾಗೂ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ ಅವರ ನಿಧನಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಜಿಲ್ಲಾ ಶಾಖೆಯಲ್ಲಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
      ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ|| ಕೆ.ಜಿ. ಕುಲಕರ್ಣಿ, ಉಪಾಧ್ಯಕ್ಷ ಸಿ. ಎಸ್. ಕರಮುಡಿ, ಕಾರ್ಯದರ್ಶಿ ಡಾ|| ಶ್ರೀನಿವಾಸ ಹ್ಯಾಟಿ, ಖಜಾಂಚಿ ಸುಧೀರ ಅವರಾದಿ, ನಿರ್ದೆಶಕರಾದ ಸೋಮರೆಡ್ಡಿ ಅಳವಂಡಿ, ಸಂತೋಷ ದೇಶಪಾಂಡೆ, ಲಕ್ಷ್ಮಿಕಾಂತ ಗುಡಿ, ಮಂಜುನಾಥ ಸಜ್ಜನ, ರಾಜೇಶ ಯಾವಗಲ್, ಟಿ.ಕೆ. ಸಾಲಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
Please follow and like us:
error