ಅಂತರ ಕಾಲೇಜು ಉಪನ್ಯಾಸ ಸ್ಫರ್ಧೆಯಲ್ಲಿ ಭವಾನಿ ಪ್ರಥಮ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ ೧೧-೦೨-೨೦೧೫ ರಂದು ಬುಧವಾರ  ಮಹಾವಿದ್ಯಾಲಯದ ಸಭಾಭವನದಲ್ಲಿ  ಬಿ.ಎಸ್ಸಿ ವಿದ್ಯಾರ್ಥಿಗಳಿಗಾಗಿ  ಕೊಪ್ಪಳ ಜಿಲ್ಲಾ ಮಟ್ಟದ  ಪದವಿ ವಿಜ್ಞಾನ  ವಿದ್ಯಾರ್ಥಿಗಳಿಗಾಗಿ  ಅಂತರ ಕಾಲೇಜು ಉಪನ್ಯಾಸ  ಸ್ಫರ್ಧೆ ಹಮ್ಮಿಕೊಳ್ಳಲಾಗಿತ್ತು
         

.  ಪ್ರಾಚಾರ್ಯ ಎಸ್. ಎಲ್ ಮಾಲಿಪಾಟೀಲ ದೀಪ ಬೆಳಗಿಸಿ ಉದ್ಘಾಟಸಿ ಇಂತಹ ವೈಜ್ಞಾನಿಕ ಉಪನ್ಯಾಸಗಳು  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಲಿವೆ ಎಂದರು. ವಿವಿಧ ಕಾಲೇಜುಗಳಿಂದ ೧೭ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಓದುತ್ತಿರುವ ಭವಾನಿ ಬೆಟ್ಟದೂರ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷರಾದ ಬಸವರಾಜ ಬಿಲ್ಲರ ಉಪಸ್ಥಿತರಿದ್ದರು. ತೀರ್ಪುಗಾರರಾಗಿ  ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಕೆ ರಾಘವೇಂದ್ರರಾವ್, ವಿಜ್ಞಾನ ಶಿಕ್ಷಕ ಡಿ ರಾಮಣ್ಣ ಕಾರ್ಯ ನಿರ್ವಹಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಮನೋಹರ ದಾದ್ಮಿ ಈ ಕಾರ್ಯಕ್ರಮ ಸಂಘಟಿಸಿದ್ದರು. ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Please follow and like us:
error