ಬಿಆರ್‌ಜಿಎಫ್ ನಿಧಿ ಯೋಜನೆಗೆ ಕೊಪ್ಪಳ ಜಿಲ್ಲೆ ಸೇರಿಸಲು ಸಂಸದ ಶಿವರಾಮಗೌಡ ಒತ್ತಾಯ

 ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಃಖಉಈ) ಯೋಜನೆಯಡಿ ಲಭ್ಯವಾಗಬೇಕಾದ ಅನುದಾನವನ್ನು ಕೊಪ್ಪಳ ಜಿಲ್ಲೆಗೆ ಬಿಡುಗೊಳಿಸಲು ಕೇಂದ್ರ ಪಂಚಾಯತ್‌ರಾಜ್ ಸಚಿವ ಕಿಶೋರ್ ಚಂದ್ ದೇವ್ ಅವರಿಗೆ ಕೊಪ್ಪಳ ಸಂಸದ ಶಿವರಾಮಗೌಡ ಅವರು ಒತ್ತಾಯಿಸಿದ್ದಾರೆ.
  ಈ ಕುರಿತಂತೆ ನವದೆಹಲಿಯಲ್ಲಿನ ಕೇಂದ್ರ ಪಂಚಾಯತಿರಾಜ್ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಸಂಸದ ಶಿವರಾಮಗೌಡ ಅವರು, ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ರೂಪಿಸಿರುವ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಃಖಉಈ)ಯನ್ನು ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯವು ನಿರ್ವಹಿಸುತ್ತದೆ.  ಕೊಪ್ಪಳ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಬಿಆರ್‌ಜಿಎಫ್ ನಿಧಿಯಡಿ ಜಿಲ್ಲೆಗೆ ಅನುದಾನ ಬಿಡುಗಡೆ ಆಗುತ್ತಿಲ್ಲ.  ಈ ಹಿಂದಿನ ರಾಷ್ಟ್ರೀಯ ಸಮವಿಕಾಸ ಯೋಜನೆಯನ್ನು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (ಬಿಆರ್‌ಜಿಎಫ್) ಯನ್ನಾಗಿ ಪರಿವರ್ತಿಸಿದ್ದು ಇದು ಶೇ. ೧೦೦ ರಷ್ಟು ಕೇಂದ್ರ ಸರ್ಕಾರದ ಅನುದಾನವಾಗಿದೆ. ಕರ್ನಾಟಕದ ೬ ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹೈದ್ರಾಬಾದ-ಕರ್ನಾಟಕದ ಬೀದರ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳಿಗೆ ಪ್ರತಿವರ್ಷವೂ ಹಾಗೂ ಕಳೆದ ವರ್ಷದಿಂದ ಯಾದಗಿರಿ ಜಿಲ್ಲೆಗೂ ಸಹ ಈ ಅನುದಾನವನ್ನು ಕೇಂದ್ರವು ಬಿಡುಗಡೆಗೊಳಿಸುತ್ತಿದೆ. ಆದರೆ, ೧೯೯೭ ರಲ್ಲಿ ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟ ಕೊಪ್ಪಳ ಜಿಲ್ಲೆಗೆ ಮಾತ್ರ ಈ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಃಖಉಈ)ಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಕೇಂದ್ರವು ಮುಂದಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಮತ್ತು ಸದಸ್ಯರಾದ ಡಾ|| ಕಸ್ತೂರಿ ರಂಗನ್ ರವರನ್ನು ಖುದ್ದಾಗಿ ಹಲವು ಬಾರಿ ಭೇಟಿಯಾಗಿ ವಿವರಣೆ ನೀಡಿದರೂ ಸಹ, ಇದುವರೆಗೂ ಸೂಕ್ತ ಸ್ಪಂದನೆ ನೀಡಿಲ್ಲ.  ಪ್ರಾದೇಶಿಕ ಅಸಮತೋಲನೆ ಅಧ್ಯಯನದ ಡಾ: ಡಿ.ಎಂ. ನಂಜುಡಪ್ಪ ಸಮಿತಿಯ ವರದಿಯ ಪ್ರಕಾರ ಹಿಂದುಳಿದ ಪ್ರದೇಶವೆನ್ನುವ ಹಣೆಪಟ್ಟಿಯನ್ನು ಕೊಪ್ಪಳ ಜಿಲ್ಲೆಯು ಹೊಂದಿದೆ. ಬೀದರ, ಗುಲ್ಬರ್ಗಾ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಹೈದ್ರಾಬಾದ್-ಕರ್ನಾಟಕದ ಭಾಗವಾಗಿದ್ದು, ಈ ನಾಲ್ಕೂ ಜಿಲ್ಲೆಗಳಿಗಿಂತಲೂ ಕೊಪ್ಪಳ ಜಿಲ್ಲೆಯು ಶೈಕ್ಷಣಿಕ, ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆ(ಃಖಉಈ)ಯಡಿ ಅನುದಾನ ಪಡೆಯಲು ಅರ್ಹವಾಗಿರುತ್ತದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯನ್ನು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆ(ಃಖಉಈ)ಗೆ ಶೀಘ್ರ ಒಳಪಡಿಸುವಂತೆ ಕೇಂದ್ರ ಪಂಚಾಯತ್‌ರಾಜ್ ಸಚಿವ ಕಿಶೋರ್ ಚಂದ್ ದೇವ್ ಅವರಿಗೆ ಸಂಸದ ಶಿವರಾಮಗೌಡ ಅವರು ಮನವಿ ಸಲ್ಲಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ, ಕೇಂದ್ರ ಸಚಿವರು, ಕೊಪ್ಪಳ ಜಿಲ್ಲೆಗೆ ಬಿಆರ್‌ಜಿಎಫ್ ಯೋಜನೆಯನ್ನು ಮಂಜೂರು ಮಾಡಲು ಅಗತ್ಯ ಕ್ರಮವಹಿಸುವಂತೆ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಂಸದರ ಕಚೇರಿ  ತಿಳಿಸಿದೆ.

Leave a Reply