ಮಾ.೩೧ ರವರೆಗೂ ತುಂಗಭದ್ರ ಕಾಲುವೆಗೆ ೧೧೦೦ ಕ್ಯೂಸೆಕ್ ನೀರು ಬಿಡಲು ನಿರ್ಧಾರ

ಕೊಪ್ಪಳ, ಜ.೧೫: ರೈತರು ಕಂಗಾಲಾಗುವ ಪ್ರಶ್ನೆಯೇ ಇಲ್ಲ ಮಾ. ೩೧ ರವರೆಗೂ ತುಂಗಭದ್ರ ಬಲದಂಡೆ ಕಾಲುವೆಗೆ ಈ ಹಿಂದೆ ನಡೆದ ಸಭೆಯ ನಿರ್ಣಯದಂತೆ ೧೧೦೦ ಕ್ಯೂಸೆಕ್ಸ್ ಕರ್ನಾಟಕ ರೈತರಿಗೆ ಹಾಗೂ ೫೫೦ ಕ್ಯೂಸೆಕ್ಸ್ ನೀರು ಬಿಡಲಾಗುವುದು ರೈತರು ನೀರನ್ನು ಸಮರ್ಪಕವಾಗಿ ಸದ್ಬಳಕೆ ಮುಂದಾಗಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ತಿಳಿಸಿದರು.
ಅವರು ರೈತರೊಂದಿಗೆ ಹೊಸಪೇಟೆಯ ಟಿಬಿಡ್ಯಾಂ ಮುಖ್ಯ ಇಂಜೀನಿಯರ್ ಕಛೇರಿಗೆ ರೈತರೊಂದಿಗೆ ತೇರಳಿ ಪ್ರತಿಭಟನೆ ನಡೆಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಂದ್ರ ಪ್ರದೇಶದ ಅಧಿಕಾರಿಗಳ ಹಾಗೂ ಕರ್ನಾಟಕ ಭಾಗದ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಪ್ರವಾಸೋಧ್ಯಮ ಸಚಿವ  ಆನಂದ ಸಿಂಗ್, ಸಂಸದೆ ಶಾಂತಾ, ಶಾಸಕರಾದ ಸೋಮಲಿಂಗಪ್ಪ, ಸುರೇಶ ಬಾಬು, ಮೃಂತುಜಯ್ಯ ಜಿನಗಾ ಸೇರಿದಂತೆ ಇತರರ ಜನಪ್ರತಿನಿಧಿಗಳ ಒತ್ತಾಯ ನಡೆಸಿ ನಂತರ ಅಧಿಕಾರಿಗಳಿಗೆ ಸಧ್ಯ ಫಸಲಿನ ವಾಸ್ಥವತೆ ತಿಳಿಸಿ ಈ ನಿರ್ಧಾರ ಕೈಗೊಳ್ಳಲಾಯಿತು. ಇದೇ ವೇಳೆ ಶ್ರೀರಾಮುಲುರವರು ನೇರೆದ ರೈತರನ್ನುದ್ದೇಶಿಸಿ ಮಾತನಾಡಿ, ರೈತರು ನೀರಿನ ಬಳಕೆಯಲ್ಲಿ ತಾರತಮ್ಮ ಮಾಡದೇ ಸದ್ಬಳಕೆಗೆ ಮುಂದಾಗಬೇಕು. ಅಲ್ಲದೇ ಬುಧವಾರದಿಂದ ಕಾಲುವೆಯ ಮೇಲ್ಬಾಗದಲಿರುವ ಕೆಲ ರೀಪೇರಿ ಕಾರ್ಯಗಳಿಗೆ ಟಾಸ್ಕ್‌ಪೋರ್ಸ್ ತಂಡ ರಚಿಸಿ ಸ್ಥಳಕ್ಕೆ ಆಗಮಿಸಲಿದ್ದಾರೆ. ರೀಪೇರಿ ಕಾರ್ಯಕ್ಕೆ ರೈತರು ಅಧಿಕಾರಿಗಳಿಗೆ ಸಹಕರಿಸಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರವಾಸೋಧ್ಯಮ ಸಚಿವ  ಆನಂದ ಸಿಂಗ್, ಸಂಸದೆ ಶಾಂತಾ, ಶಾಸಕರಾದ ಸೋಮಲಿಂಗಪ್ಪ, ಸುರೇಶ ಬಾಬು, ಮೃಂತುಜಯ್ಯ ಜಿನಗಾ, ರಾಜ್ಯಾಧ್ಯಕ್ಷ ರಾಮಲಿಂಗನಗೌಡ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ನಿಯೋಜಿಯ ಅಭ್ಯರ್ಥಿಗಳಾದ ಕೆ.ಎಂ. ಸೈಯದ್, ನವೀನ ಗುಳಗಣ್ಣನವರ, ರಾಜಶೇಖರ ಗೋನಾಳ ಸೇರಿದಂತೆ ಇತರರು ಹಾಜರಿದ್ದರು.
Please follow and like us:
error