ಭಾವೈಕ್ಯತಾ ವೇದಿಕೆಯಿಂದ ದಿ.೨೮ ರಿಂದ ೩೦ ರವರೆಗೆ ಬೇಸಿಗೆ ಶಿಬಿರದ ನಾಟಕೋತ್ಸವ.

ಹೊಸಪೇಟೆ: ಭಾವೈಕ್ಯತಾ ವೇದಿಕೆಯು ಇದೇ ದಿ.೨೮ರಿಂದ ೩೦ರವರೆಗೆ ಬೇಸಿಗೆ ಶಿಬಿರದ ನಾಟಕೋತ್ಸವ ನಡೆಸಲಿದೆ.
೨೧ ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದಲ್ಲಿ ತಯಾರಾದ ನಾಟಕಗಳು ದಿ. ೨೮ರಂದು ಚೋರಚರಣದಾಸ್ ನಾಟಕ ಪ್ರದರ್ಶಿತಗೊಳ್ಳಲಿದೆ. ಈ ನಾಟಕವನ್ನು ಹಬೀಬ್ ತನ್ವೀರ್ ರಚಿಸಿದ್ದು, ನಾಟಕವನ್ನು ಶಾಹೀರಾ ನಿರ್ದೇಶಿಸಿದ್ದಾರೆ. ದಿ.೨೯ರಂದು ಇರುವೆ-ಕಾಗೆ ಮತ್ತು ಪುಟ್ಟಕ್ಕ ಜನಪದ ಕತೆಗಳ ನಾಟಕವನ್ನು ಪಿ.ಸಹನಾ ಮತ್ತು ಮಹಮದ್ ಯುನೀಸ್ ನಿರ್ದೇಶಿಸಿದ್ದಾರೆ. ದಿ.೩೦ರಂದು ಸಫ್ದರ್ ಹಸ್ಮಿ ನಾಟಕ ಕೆಂಪು ಹೂವು ಪ್ರದರ್ಶಿತಗೊಳ್ಳಲಿದ್ದು, ಈ ನಾಟಕವನ್ನು ಸಹರಾ ನಿರ್ದೆಶಿಸಲಿದ್ದಾರೆ. ಇದು ಅಲ್ಲದೇ ಎರಡು ರೂಪಕಗಳು, ಐದು ಕೋಲಾಟ ನಡೆಯಲಿವೆ. ಮಣ್ಣಿನಲ್ಲಿ ಗೊಂಬೆ ತಯ್ಯಾರಿಸಿರುವುದು. ಮುಖವಾಡ ರಚಿಸಿರುವುದು. ರಬ್ಬರ್ ಪೀಪಿಯಿಂದ ಕಾಗದ ಬಳಿಸಿ ಗೊಂಬೆ ಮಾಡಿರುವುದು ಹಾಗೂ ಚಿತ್ರಕಲೆ ಪ್ರದರ್ಶನ.

Leave a Reply