ಪೊಲೀಸರ ಸಾಹಸ, ಧೈರ್ಯ, ತ್ಯಾಗ ಸರ್ವರಿಗೂ ಮಾದರಿ ಎಸ್. ಪ್ರಭಾಕರನ್.

ಕೊಪ್ಪಳ,
ಅ.೨೧ (ಕ ವಾ) ಸಮಾಜದ ಕಲ್ಯಾಣ ಕಾರ್ಯಗಳಿಗೆ ಹಾನಿಯನ್ನುಂಟು ಮಾಡುವ
ಅಪರಾಧಗಳನ್ನು ತಡೆಗಟ್ಟುವಲ್ಲಿ ಅವಿರತ ಪರಿಶ್ರಮ ನಡೆಸುವ ಪೊಲೀಸರ ಧೈರ್ಯ, ಸಾಹಸ, ತ್ಯಾಗ
ಮನೋಭಾವನೆ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ
ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಹೇಳಿದರು.
     ಕೊಪ್ಪಳ ಜಿಲ್ಲಾ ಪೊಲೀಸ್
ಇಲಾಖೆ ವತಿಯಿಂದ ಜಿಲ್ಲಾ ಪೊಲೀಸ್ ಕಾರ್ಯಾಲಯದ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ
ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು
ಮಾತನಾಡಿದರು.
     ೧೯೫೯ ರ ಅಕ್ಟೋಬರ್ ೨೧ ರಂದು ಲಡಾಕ್‌ನಲ್ಲಿ ಚೀನಾ
ಸೇನೆಯೊಂದಿಗೆ ನಡೆದ ಹೋರಾಟದಲ್ಲಿ ವೀರಮರಣ ಹೊಂದಿದ ಲೆಫ್ಟಿನೆಂಟ್ ಕರ್ನಲ್ ಕರಣ್‌ಸಿಂಗ್
ಹಾಗೂ ಅವರ ನೇತೃತ್ವದಲ್ಲಿ ಭಾಗವಹಿಸಿದ್ದ ಸಿಆರ್‌ಪಿಎಫ್ ಯೋಧರ ಸ್ಮರಣಾರ್ಥವಾಗಿ ಪೊಲೀಸ್
ಹುತಾತ್ಮರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್ ೨೧ ರಂದು ದೇಶಾದ್ಯಂತ
ಆಚರಿಸಲಾಗುತ್ತದೆ. ದೇಶದ ಸಾರ್ವಜನಿಕರ ರಕ್ಷಣೆಗಾಗಿ ತ್ಯಾಗ, ಬಲಿದಾನ ನೀಡಿದ
ಪೊಲೀಸರನ್ನು ನೆನೆಯುವುದು ಆಚರಣೆಯ ಉದ್ದೇಶವಾಗಿದೆ. ಇಂದು ಪೊಲೀಸರು ದೇಶದ ಆಂತರಿಕ
ರಕ್ಷಣೆಗೆ ಸೀಮಿತವಾಗಿರದೇ, ಪಂಜಾಬ್ ಟೆರರಿಸ್ಟ್ ಆಪರೇಷನ್, ಆಪರೇಶನ್ ಬ್ಲ್ಯೂಸ್ಟಾರ್
ನಂತಹ ಸೇನಾ ಮಟ್ಟದ ಕಾರ್ಯಾಚರಣೆಗಳಲ್ಲೂ ಸಹ ಭಾಗವಹಿಸಿ, ದೇಶಕ್ಕೆ ತಮ್ಮದೇ ಆದ ಅಮೂಲಾಗ್ರ
ಸೇವೆಯನ್ನು ಸಲ್ಲಿಸುತ್ತಿರುವುದು ಶ್ಲಾಘನೀಯ.  ಚಂಬಲ್ ಕಣಿವೆಯ ಕಾರ್ಯಾಚರಣೆ,
ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ, ಮುಂಬೈ ಭಯೋತ್ಪಾದಕ ದಾಳಿಯ ವಿಶೇಷ ಕಾರ್ಯಾಚರಣೆ,
ದೇಶದ ಕೆಲವು ರಾಜ್ಯಗಳಲ್ಲಿ ಕಂಡು ಬರುವ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಲ್ಲಿ ಅನೇಕ
ಪೊಲೀಸರು ತಮ್ಮ ಪ್ರಾಣ ತ್
     ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ತ್ಯಾಗರಾಜನ್
ಮಾತನಾಡಿ, ದೇಶದಲ್ಲಿ ಈ ವರ್ಷ ಕರ್ತವ್ಯದಲ್ಲಿರುವಾಗ ಬಲಿದಾನಗೊಂಡ ಪೊಲೀಸರ ಹೆಸರುಗಳನ್ನು
ಸ್ಮರಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್ ಕೆ, ಡಿವೈಎಸ್‌ಪಿ ರಾಜೀವ್ ಮಾಂಗ್ ಸೇರಿದಂತೆ
ಇಲಾಖಾಧಿಕಾರಿಗಳು, ಪತ್ರಕರ್ತರು, ಮುಖಂಡರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ
ಪುಷ್ಪಗುಚ್ಛ ಸಲ್ಲಿಸಿದರು. ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ಆರ್.ಪಿ.ಐ ಮತ್ತು
ಡಿ.ಎ.ಆರ್ ನೇತೃತ್ವದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ಗಾಳಿಯಲ್ಲಿ ಮೂರು ಸುತ್ತು
ಗುಂಡು ಹಾರಿಸಿ, ಎರಡು ನಿಮಿಷ ಮೌನಾಚರಿಸಲಾಯಿತು.

ಯಾಗ ಮಾಡಿ, ಹುತಾತ್ಮರಾಗಿದ್ದಾರೆ. ಆಂತರಿಕವಾಗಿ ಅಥವಾ
ಬಾಹ್ಯವಾಗಿ ಪೊಲೀಸರಿಲ್ಲದ ದೇಶವನ್ನು ಊಹಿಸುವುದು ಕೂಡಾ ಕಷ್ಟಸಾಧ್ಯ. ಸುಮಾರು ೧೨೫
ಕೋಟಿಯಷ್ಟು ಬೃಹತ್ ಜನಸಂಖ್ಯೆ ಹೊಂದಿರುವ ಭಾರತದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ
ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು
ಬಣ್ಣಿಸಿದರು.

Please follow and like us:
error