fbpx

ಅಜ್ಜನ ಜಾತ್ರೆಗೆ ಬನ್ನಿ. ಉದ್ಯೋಗ ಗಿಟ್ಟಿಸಿಕೊಳ್ಳಿ.

ಕೊಪ್ಪಳ-24- ಅಜ್ಜನ ಜಾತ್ರೆಗೆ ಬನ್ನಿ, ಉದ್ಯೋಗ ಗಿಟ್ಟಿಸಿಕೊಳ್ಳಿರಿ. ಹೌದು ಈ ಮಾತು ಅಕ್ಷರಶ: ಸತ್ಯ. ಶ್ರೀಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಪೂಜ್ಯ ಶ್ರೀಗಳು ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಂಡಿದ್ದಾರೆ. ಈ ಉದ್ಯೋಗಮೇಳದಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಭಾಗವಹಿಸಬಹುದು.  ಉದ್ಯೋಗದ ಕನಸುಕಾಣುತ್ತಿರುವ ಯುವಕರು ಕೊಪ್ಪಳದ ಅಜ್ಜನ ಜಾತ್ರೆಗೆ ಬಂದು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ಅವಕಾಶ ತಮ್ಮದಾಗಿಸಿಕೊಳ್ಳಬಹುದು. ಉದ್ಯೋಗದ ಆಕಾಂಕ್ಷಿಗಳು ಮೊದಲು ತಮ್ಮ ಹೆಸರನ್ನು ಜಾತ್ರೆ ಆವರಣದಲ್ಲಿ ಪೋಲಿಸ್ ಚೌಕಿಯ ಪಕ್ಕದಲ್ಲಿ ತೆರೆದಿರುವ ನೊಂದಣಿ ಕೇಂದ್ರದಲ್ಲಿ ನೊಂದಾಹಿಸಬೇಕು. ಈಗಾಗಲೇ ಆ ನೊಂದಣಿ ಕಾರ್ಯ
ಪ್ರಾರಂಭವಾಗಿದೆ. ಹೆಸರು ನೊಂದಾಯಿಸಿದ ಅಭ್ಯರ್ಥಿಗಳು ಕಡ್ಡಾಯವಾಗಿ 
ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ
ಬೆಳಿಗ್ಗೆ  ೯ ರಿಂದ ಜರುಗಲಿರುವ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಬೇಕು. ನಂತರ ದಿನಾಂಕ
೦೬-೦೨-೨೦೧೬ ಮತ್ತು ೦೭-೦೧ -೨೦೧೬ ರಂದು ಜರುಗಲಿರುವ ಬೃಹತ್ ಉದ್ಯೋಗಮೇಳದಲ್ಲಿ
ಭಾಗವಹಿಸಬೇಕು. ವಿಶೇಷವೆಂದರೆ ಈ ಉದ್ಯೋಗ ಮೇಳದಲ್ಲಿ ೪೦ಕ್ಕೂ ಹೆಚ್ಚು ಕಂಪನಿಗಳು
ಭಾಗವಹಿಸಲಿದ್ದು ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗದ ಪತ್ರವನ್ನು ನೀಡಲಾಗುವದು.
ಮೊದಲು ಹೆಸರು ನೊಂದಾಯಿಸಿದ ೫೦೦೦ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರ ಪ್ರವೇಶ ಸೀಮಿತವಿದೆ.
ನೊಂದಣಿ ಕಾರ್ಯ ಆರಂಭಿಸಿದ ಎರಡೇ ದಿನದಲ್ಲಿ ೩೦೦ ಕ್ಕಿಂತ ಹೆಚ್ಚು ನಿರುದ್ಯೋಗಿಗಳು
ನೊಂದಣಿಮಾಡಿಸಿದ್ದಾರೆ. ಉದ್ಯೋಗ ಮೇಳದ ಮುಖ್ಯಸ್ಥರಾದ ಎಸ್.ಜಿ.ಟ್ರಸ್ಟ್ ಸದಸ್ಯ
ಸಂಜಯಕೊತಬಾಳರ ನೇತ್ರತ್ವದಲ್ಲಿ ನಡೆಯಲಿದ್ದು ಪ್ರಾದ್ಯಾಪಕರಾದ ಎಸ್.ಬಿ.ಹಿರೇಮಠ, ಬಿ.ಇಡಿ
ಕಾಲೇಜಿನ ಪ್ರಾಚಾರ್ಯ ಡಾ.ಪ್ರಕಾಶಬಡಿಗೇರ ಈ ಮೇಳದ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ ೯೮೪೫೦೦೨೨೫೯, ೯೮೮೦೨೬೪೭೫೧

Please follow and like us:
error

Leave a Reply

error: Content is protected !!