fbpx

ಪರಿಷತ್ ಚುನಾವಣೆ ಕಾಂಗ್ರೆಸ್ ವಿಜಯೋತ್ಸವ.

ಕೊಪ್ಪಳ- ೩೦, ಕೊಪ್ಪಳ-ರಾಯಚೂರು ವಿದಾನಪರಿಷತ್ ಚುನಾವಣೆಯಲ್ಲಿ ಜಯಬೇರಿ ಬಾರಿಸಿದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜಪಾಟೀಲ ಇಟಗಿಯವರ ವಿಜಯೋತ್ಸವದಲ್ಲಿ ಪಾಲ್ಗೂಂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಮಾತನಾಡಿ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳು ಜನತೆಗೆ ನೀಡಿರುವ ಜನಪರ ಯೋಜನೆಗಳೆ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಿದೆ. ಭೌದ್ಧಿಕವಾಗಿ ದಿವಾಳಿ ಎದ್ದಿರುವ ಬಿಜೆಪಿ ನಾಯಕರು ಇನ್ನಾದರು ಪಾಠಕಲಿತುಕೊಳ್ಳಬೇಕು. ನಾಲಿಗೆಗೆ ಹಿಡಿತ ಇಲ್ಲದ ಇವರು ಈ ಚುನಾವಣೆಯಿಂದ ನೆಲಕಚ್ಚಿದ್ದಾರೆ. ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಯ ಚುನಾಯಿತ
ಪ್ರತಿನಿಧಿಗಳು ಅಪಾರಬೆಂಬಲ ಸೂಚಿಸಿದ್ದು, ನಾಡಿನಲ್ಲಿ ಕಾಂಗ್ರೆಸ್ ಅಲೆ ತೇಲುತ್ತಿದೆ
ಎಂದು ಹೇಳಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಂದಣ್ಣ ಅಗಡಿ, ಕೆ.ಎಮ್.ಸಯ್ಯದ್,
ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಹನುಮರೆಡ್ಡಿ ಹಂಗನಕಟ್ಟಿ, ಬಾಳಪ್ಪ ಬಾರಕೇರ,
ಅಮ್ಜದ್ ಪಟೇಲ, ಮುತ್ತುರಾಜ ಕುಷ್ಟಗಿ, ಮೌಲಾಹುಸ್ಸೇನ್ ಜಮೇದಾರ, ರಾಮಣ್ಣ ಹದ್ದಿನ್,
ಗಾಳೆಪ್ಪ ಪೂಜಾರ, ಯಮನೂರಪ್ಪ ನಾಯಕ್, ಶ್ರೀಮತಿ ಶಕುಂತಲಾ ಹುಡೇಜಾಲಿ, ಶ್ರೀಮತಿ
ಇಂದಿರಾಭಾವಿ ಕಟ್ಟಿ, ಮಾನ್ವಿಪಾಷಾ, ಶಿವಾನಂದ ಹೂದ್ಲೂರು, ಚಿಕನ್‌ಪೀರಾ, ಅಕ್ತರ
ಫಾರುಕಿ, ನವಾಜ್ ಹುಸ್ಸೇನಿ, ಮುನೀರ್ ಸಿದ್ದಕಿ,  ಇಬ್ರಾಹಿಂ ಅಡ್ಡೇವಾಲೆ, ಅಜ್ಜಪ್ಪ
ಸ್ವಾಮಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!