ಮಾ. ೦೭ ರಂದು ಕೊಪ್ಪಳ ನಗರದಲ್ಲಿ ನೀರು ಪೂರೈಕೆ ಇಲ್ಲ

 ಕೊಪ್ಪಳ ಜೆಸ್ಕಾಂ ವಿಭಾಗದವರು ದುರಸ್ತಿಯ ಕಾರಣದಿಂದ ಮಾ. ೦೭ ರಂದು ವಿದ್ಯುತ್   ನಿಲುಗಡೆ ಮಾಡುವುದರಿಂದ, ಅಂದು ಕೊಪ್ಪಳ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
  ಜೆಸ್ಕಾಂ ನವರು ಕೊಪ್ಪಳ ನಗರಕ್ಕೆ ನೀರು ಪೂರೈಕೆ ಮಾಡಲಾಗುವ ಫಿಲ್ಟರ್ ಬೆಡ್ ನಿಂದ ಕಾತರಕಿ ಜಾಕ್‌ವೆಲ್ ವರೆಗಿನ ವ್ಯಾಪ್ತಿಯಲ್ಲಿ ಮಾ. ೦೭ ರಂದು ವಿದ್ಯುತ್ ನಿಲುಗಡೆ ಮಾಡುವುದರಿಂದ, ಅಂದು ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.

Leave a Reply