ಶಾಲಾ ಸಂಸತ್ತನ್ನು ಚುನಾವಣೆ ಮೂಲಕ ರಚನೆ.

ಕೊಪ್ಪಳ : ನಗರದ ಪ್ರತಿಷ್ಟಿತ ಶಾರದಾ ಪ್ರಾಥಮಿಕ ಮತ್ತು ಪ್ರೌಢ ಶಾಲೇಯಲ್ಲಿ ಚುನಾವಣೆಯ ಮೂಲಕ ಶಾಲಾ ಸಂಸತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಮತದಾನಕ್ಕೆ ಚಾಲನೆ ಮಾಡಿದ  ಪ್ರಾಚಾರ್ಯgರಾದ ಮಲ್ಲಿಕಾರ್ಜುನ ಚೌಕಿಮಠ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪಾರದರ್ಶಕ ಚುನಾವಣೆಯ ಮಹತ್ವ ಮತ್ತು ಅದರ ಹಂತಗಳ ಬಗ್ಗೆ ಪ್ರತ್ಯೆಕ್ಷ ಅನುಭವ ಮೂಡಿಸಿ ದೇಶದ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯುವ ಸಾಮರ್ಥ್ಯ ಅನುಭವ ಮೂಡಿಸುವುದೇ ಮುಖ್ಯ ಎಂದು ಹೇಳಿದರು.
    ಚುನಾವಣೆಗೆ ೩೦ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ನಾಮಪತ್ರ ಪರಿಶಿಲನೆ ಮಾಡಿ ಅಭ್ಯರ್ಥಿಗಳಿಗೆ ತಲಾ ಒಂದು ಗುರುತಿನ ಚಿಹ್ನೆ ನೀಡಲಾಯಿತು. ಬ್ಯಾಲೆಡ್ ಪತ್ರಗಳನ್ನು ಸಿದ್ದಪಡಿಸಿ ಅದರಲ್ಲಿ ಮತದಾನ ಮಾಡಲು ಅವಕಾಶ ನೀಡಲಾಯಿತು ಒಟ್ಟು ಮತದಾರರ ಸಂಖ್ಯೆ ೨೬೬ ಅದರಲ್ಲಿ ಬಾಲಕರು ೧೩೫ ಜನ, ಬಾಲಕಿಯರು ೧೩೧ ಜನ ಮತದಾನ ಮಾಡಿ ೧೧ ಜನರನ್ನು ಆಯ್ಕೆ ಮಾಡಿದರು. ಹೆಚ್ಚಿನ ಮತ ಪಡೆದು ಆಯ್ಕೆಯಾzರು.
    ಆಯ್ಕೆ ಯಾದ ಪದಾದಿಕಾರಿಗಳು ಪಟ್ಟಿ ಇಂತಿದೆ. ಪ್ರಧಾನ ಮಂತ್ರಿ-ಕಾರ್ತಿಕ ಹಾದಿಮನಿ, ಉಪಪ್ರಧಾನಿ ಮಂತ್ರಿ-ಉಜ್ಮಾಬಾನು, ಸಾಂಸ್ಕೃತಿಕ ಮಂತ್ರ- ಸಿಂಧೂ ಪಾಟೀಲ್, ಪರಿಸರ ಮತ್ತು ವಿಜ್ಞಾನ – ರಾಘವೇಂದ್ರ ಮುಂಡರಗಿ, ಕ್ರೀಡಾ ಮಂತ್ರಿ- ಬಸವಪ್ರಭು, ಪ್ರವಾಸ ಮಂತ್ರಿ – ಅನಿಲ್ ನಾಯಕ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ -ಸಚಿನ ಕುಮಾರ, ಗ್ರಂಥಾಲಯ ಮಂತ್ರಿ ಮಹಾದೆವಪ್ಪ ಈಟಿ, ಹಣಕಾಸು ಮಂತ್ರಿ – ರಾಘವೇಂದ್ರ ದೇಶಪಾಂಡೆ, ಶಿಕ್ಷಣ ಮಂತ್ರಿ – ಇಮ್ರಾನ್  ಅಲಿವಾಣಿ, ಶಿಸ್ತು ಮಂತ್ರಿ ಭುವನೇಶ್ವರಿ ಆನಂದಳ್ಳಿ ಆಯ್ಕೆಯಾಗಿದ್ದಾರೆ. ಶಾಲೆಯ ಶಿಕ್ಷಕರು ಚುನಾವಣಾ ಸಿಬ್ಬಂದಿಗಳಾಗಿ ಕೆಲಸ ರ್ನಿಹಿಸಿದರು. ಎರಡು ಮತಗಟ್ಟೆಗಳ ಮತ ಹೆಣಿಕೆಯನ್ನು ಅಭ್ಯರ್ಥಿಗಳ ಸಮ್ಮುಖದಲ್ಲೆ ನೆರವೇರಿಸಿದರು. ಇದರೊಟ್ಟಿಗೆ ಮಕ್ಕಳಿಗೆ ಸಾರ್ವತ್ರಿಕ ಚುನಾವಣೆ ಪ್ರತ್ಯಕ್ಷ ಅನುಭವ ನೀಡಲಾಯಿತು.
Please follow and like us:
error