ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆ

ಕೊಪ್ಪಳ: ತಾಲೂಕಿನ ಕೊಡದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು.
   ದ್ವಜಾರೋಣವನ್ನು ಶಾಲೆಯ  ಎಸ್.ಡಿ.ಎಮ್.ಸಿಯ ಅಧ್ಯಕ್ಷರಾದ  ದೇವಪ್ಪ ಚಕ್ರಸಾಲಿ ನೇರವೆರಿಸಿದರು.
  ಹೈದ್ರಾಬಾದ ಕರ್ನಾಟಕ ವಿಮೋಚನ ದಿನಾಚರಣೆಯ ಕುರಿತು ಶಿಕ್ಷಕರಾದ ಮಂಜುನಾಥ ಕೊಪ್ಪಳ ಮಾತನಾಡಿದರು.
 ಸರ್ದಾರ ವಲ್ಲಬಾಯಿ ಪಟೇಲರ ಜೀವನ ಹಾಗೂ ಅವರ ಸಾದನೆಯ ಬಗ್ಗೆ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ತಿಳಿಸಿಕೊಟ್ಟರು.
    ಕಾರ್ಯಕ್ರಮದಲ್ಲಿ ಊರಿನ ಗುರು-ಹಿರಿಯರು ಗ್ರಾಮ ಪಂಚಾಯತ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು ಮುಂತಾದವರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಶ್ರೀಶೈಲ ಪಟ್ಟಣಶೆಟ್ಟಿ ನಿರ್ವಹಿಸಿದರು. ಶಿಕ್ಷಕರಾದ ಶ್ರೀಮತಿ ಶ್ವೇತಾ ಸ್ವಾಗತಿಸಿ, ಪ್ರಭಾವತಿ ವಂದಿಸಿದರು.

ಜಿಲ್ಲಾ ಮಟ್ಟಕ್ಕೆಆಯ್ಕೆ :ಅಭಿನಂದನೆ
ಕೊಪ್ಪಳ: ನಗರದಜಿಲ್ಲಾಕ್ರೀಡಾಂಗಣದಲ್ಲಿಇತ್ತೀಚೆಗೆಜರುಗಿದ ಕೊಪ್ಪಳ ತಾಲೂಕ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ ಹಾಗೂ ಗ್ರಾಮೀಣಕ್ರೀಡಾಕೂಟ(ಪೈಕಾ)ದಲ್ಲಿತಾಲೂಕಿನ ಬೂದಗುಂಪಾಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಬಾಲಕರ ವಿಭಾಗದಕೋಕೋದಲ್ಲಿ ಪ್ರಥಮ ಸ್ಥಾನ ಹಾಗೂ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.
ಅಲ್ಲದೆ ಬಾಲಕಿಯರ ವಿಭಾಗದಲ್ಲಿ ೮೦೦ ಮೀಟರ್‌ಓಟದಲ್ಲಿ ವಿದ್ಯಾರ್ಥಿನಿಯಾದ ಮಲ್ಲಮ್ಮಒಂಟಿಗಾರ, ಬಾಲಕಿಯರ ಕೋಕೋ ತಾಲೂಕ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಆಯ್ಕೆಗೆಅಭಿನಂದನೆ: ಜಿಲ್ಲಾ ಮಟ್ಟಕ್ಕೆಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರಾದಎಂ.ತಿಪ್ಪೇಸ್ವಾಮಿ, ಶಿಕ್ಷಕರಾದ ರಾಜಾಭಕ್ಷಿ, ಚನ್ನಪ್ಪ,ಶಂಕ್ರಪ್ಪ ಹಲಿಗೇರಿ, ರಮೇಶ ಪಿರಂಗಿ, ಕೆ.ಎಮ್.ವಾಣಿ, ದೈಹಿಕ ಶಿಕ್ಷಕರಾದ ನಾಗೇಶ ಕಂಬಳಿ, ಎಸ್.ಡಿ.ಎಮ್.ಸಿ.ಯ ಅಧ್ಯಕ್ಷರಾದ ಕೆಂಪ ಹನುಮಪ್ಪ ಪೆದ್ಲ, ಹಾಗೂ ಸರ್ವ ಸದಸ್ಯರು, ಹಳೇಯ ವಿದ್ಯಾರ್ಥಿಗಳು,ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.
           ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆ
ಕೊಪ್ಪಳ: ತಾಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು.
   ದ್ವಜಾರೋಣವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ವೀರೇಶ ಅರಳಿಕಟ್ಟಿ ನೇರವೆರಿಸಿದರು.
  ಹೈದ್ರಾಬಾದ ಕರ್ನಾಟಕ ವಿಮೋಚನ ದಿನಾಚರಣೆಯ ಕುರಿತು ಶಿಕ್ಷಕರಾದ ಸಾವಕ್ಕ ಹುಬ್ಬಳಿ ಮಾತನಾಡಿದರು.
 ಸರ್ದಾರ ವಲ್ಲಬಾಯಿ ಪಟೇಲರ ಜೀವನ ಹಾಗೂ ಅವರ ಸಾದನೆಯ ಬಗ್ಗೆ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ ತಿಳಿಸಿಕೊಟ್ಟರು.
    ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಕರಾದ ಬಿ.ಎಮ್.ನಾಗರಡ್ಡಿ, ಭೂ ದಾನಿಯವರಾದ ಹುಚ್ಚಮ್ಮ ಚೌದ್ರಿ ಮುಂತಾದವರು ಹಾಜರಿದ್ದರು.
 ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ನಾಗರಾಜ ಪರಡೇಕರ ನಿರ್ವಹಿಸಿದರು.
   ಶಿಕ್ಷಕರಾದ ನಾಗಮೂರ್ತಿ ಪತ್ತಾರ ಸ್ವಾಗತಿಸಿ, ವೆಂಕಪ್ಪ ಹನಸಿ ವಂದಿಸಿದರು.

Leave a Reply