You are here
Home > Koppal News > ಅಂಬೇಡ್ಕರ ವಿಧ್ಯಾರ್ಜನೆಯೇ ಒಂದು ಮಹಾನ್ ಸಾಧನೆ: ಸಿ.ವಿ.ಜಡಿ

ಅಂಬೇಡ್ಕರ ವಿಧ್ಯಾರ್ಜನೆಯೇ ಒಂದು ಮಹಾನ್ ಸಾಧನೆ: ಸಿ.ವಿ.ಜಡಿ

ಕೊಪ್ಪಳ, ಜ.೦೫: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರವರ ವಿದ್ಯಾರ್ಜನೆಯೇ ಅದೊಂದು ಮಹಾನ್ ಸಾಧನೆಯೇ ಸರಿ ಎಂದು ಸಿ.ವಿ ಜಡಿ ಹೇಳಿದರು.ಅವರು ಶನಿವಾರ ಬಾಲಕರ ಸ.ಪ.ಪೂ. ಕಾಲೇಜ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಲೇಜ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರವರ ಪರಿ ನಿರ್ವಾಣ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ತಮ್ಮ ವಿದ್ಯಾರ್ಥಿ ಜೀವನದ ವಿಧ್ಯಾರ್ಜನೆ ವೇಳೆ ಸಾಕಷ್ಟು ತೊಂದರೆ ಎದುರಿಸಿದರು. ಅಲ್ಲದೆ ಹಗಲಿರುಳೆನ್ನದೇ ಚಲದಿಂದ ವಿಧ್ಯಾರ್ಜನೆ ಮಾಡಿದರಲ್ಲದೆ ವಿದೇಶದಲ್ಲೂ ಉನ್ನತ ವ್ಯಾಸಂಗ ಪಡೆದು ನಮ್ಮ ರಾಷ್ಟ್ರಕ್ಕೆ ಸಂವಿಧಾನ ರೂಪಿಸಿ ಸಂವಿಧಾನ ಶಿಲ್ಪಿಯಾದರು. ಅಂತೆಯೇ ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳಲ್ಲದೆ, ಚಲದ ವಿಧ್ಯಾರ್ಜನೆಯಂತಹ ಆದರ್ಶಗಳನ್ನು ರೂಢಿಸಿಕೊಂಡು ರಾಷ್ಟ್ರಕ್ಕೆ ಕೀರ್ತಿ ತರುವಂತರಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಚಾರ್ಯ ಬಿ.ರಾಜೂರು, ಮುಖ್ಯ ಆತಿಥ್ಯವಹಿಸಿದ್ದ ಡಾ. ಗವಿಸಿದ್ದಪ್ಪ ಹಂದ್ರಾಳ, ಡಾ. ಜ್ಞಾನಸುಂದರರವರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರವರ ವಿಚಾರಧಾರೆ, ವಿಚಾರ ಶಕ್ತಿ, ಕಾನೂನು ಕುರಿತು ತಿಳಿಸಿದರು. ರಾಮಣ್ಣ ಕಂದಾರಿ ಹಾಗೂ ಅವರ ತಂಡದವರು ಅಂಬೇಡ್ಕರರವರ ಗೀತೆಗಳನ್ನು ಹಾಗೂ ಜಾನಪದ ಹಾಡುಗಳನ್ನು ಹಾಡಿದರು. ಇಲಾಖೆಯ ರಾಜೇಂದ್ರಬಾಬು ಆರಂಭದಲ್ಲಿ ಸ್ವಾಗತಿಸಿ, ವಂದಿಸಿದರು. 

Leave a Reply

Top