ಹೈ-ಕ ಯುವ ಸಾಹಿತ್ಯ ಸಮ್ಮೇಳನ ಮುಂದೂಡಿಕೆ.

ಕೊಪ್ಪಳ,ಅ.೨೧ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ  ಆವರಣ ಹುಲಿಗಿ ಗ್ರಾಮದಲ್ಲಿ ಇದೇ ೨೭ ರ ಮಂಗಳವಾರದಂದು ನಡೆಯಬೇಕಾಗಿದ್ದ ಹೈದ್ರಾಬಾದ್ ಕರ್ನಾಟಕ ಪ್ರಥಮ ಯುವ ಸಾಹಿತ್ಯ ಸಮ್ಮೇಳನ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಸಂಘಟಕ ಹಾಗೂ ಹೈ-ಕ ನಾಗರೀಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು, ಸಾಹಿತಿ, ಕವಿಗಳು ಪ್ರಗತಿಪರ ಸಂಘಟನೆಗಳು ಸಹಕರಿಸುವಂತೆ ತಿಳಿಸಿದ ಅವರು, ಶೀಘ್ರ ಸಭೆ ಸೇರಿ ದಿನಾಂಕವನ್ನು ಪ್ರಕಟಿಸಲಾಗುವುದು. ಮುಂದಿನ ದಿನಾಂಕ ನಿಗಧಿಯಾಗುವವರೆಗೆ ದಿ.೨೭ ರ ಯುವ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ ಎಂದು ಸಂಘಟಕ ಹಾಗೂ ಹೈ-ಕ ನಾಗರೀಕರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಅವರು ತಿಳಿಸಿದ್ದಾರೆ.
Please follow and like us:
error