ಸ್ವಯಂ ಸೇವಾ ಸಂಸ್ಥೆಗಳಿಗೆ ನೆರವು ಧನ ಸಹಾಯ : ಅರ್ಜಿ ಆಹ್ವಾನ

  ರಾಜಾರಾಂ ಮೋಹನರಾಯ್ ಪ್ರತಿಷ್ಠಾನ, ಕೊಲ್ಕತ್ತಾ ಇವರಿಂದ ಪ್ರಸಕ್ತ ಸಾಲಿಗೆ ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ ಯೋಜನೆ ಅಡಿಯಲ್ಲಿ ಧನ ಸಹಾಯ ಮಂಜೂರಾತಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 
ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘಟನೆಗಳಿಗೆ, ಸಂಸ್ಥೆಗಳಿಗೆ ಪುಸ್ತಕಗಳನ್ನು, ಪೀಠೋಪಕರಣಗಳನ್ನು ಹಾಗೂ ಸಲಕರಣೆಗಳನ್ನು ಖರೀದಿಸಲು ಹಾಗೂ ಈ ಸಂಘಟನೆಯ, ಸಂಸ್ಥೆಯ ಸಲುವಾಗಿ ಗ್ರಂಥಾಲಯದ ಕಟ್ಟಡವನ್ನು ಅಭಿವೃದ್ಧಿಪಡಿಸಲು ಕೈಗೊಳ್ಳುವ ಹೆಚ್ಚುವರಿ ನಿರ್ಮಾಣ ಸೇರಿದಂತೆ, ಕಟ್ಟಡ ಕಾಮಗಾರಿಗಳಿಗೆ ಹಣ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಸಂಬಂಧಪಟ್ಟ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳು, ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ ಇವರಿಂದ ಅರ್ಜಿ ಪಡೆದು ಎಲ್ಲಾ ಮಾಹಿತಿಯೊಂದಿಗೆ ೨೦೧೪ ರ ಜ.೧೫ ರೊಳಗಾಗಿ ಸಂಬಂಧಿಸಿದ ಗ್ರಂಥಾಲಯ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಆಯಾ ಜಿಲ್ಲೆಯ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯ ಅಧಿಕಾರಿಯವರಿಂದ ದೃಢೀಕರಣಗೊಂಡು ಬಂದ ಅರ್ಜಿಗಳನ್ನು ರಾಜ್ಯದ ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ ಯೋಜನೆಗಳ ಅನುಷ್ಠಾನಕ್ಕೆ ಇರುವ ಸಮಿತಿಯು ಪರಿಶೀಲಿಸಿ ಪರಿಪೂರ್ಣ ಮಾಹಿತಿಯೊಂದಿಗಿನ ಅರ್ಜಿಗಳನ್ನು ಪ್ರತಿಷ್ಠಾನಕ್ಕೆ ಶಿಫಾರಸ್ಸಿನೊಂದಿಗೆ ಕಳುಹಿಸಲಿದೆ. 
ಧನ ಸಹಾಯಕ್ಕೆ ಬೇಕಾದ ಅರ್ಜಿ ನಮೂನೆಯಲ್ಲಿ ಕಂಡು ಬರುವ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು, ಈ ಯೋಜನೆಯು ಕೇಂದ್ರ ಸರ್ಕಾರದ ನಿಬಂಧನೆಗೆ ಒಳಪಟ್ಟು ನಿರ್ವಹಣೆಯಾಗುತ್ತಿರುವುದರಿಂದ ಅರ್ಜಿ ಮತ್ತು ಸೂಕ್ತ ದಾಖಲೆಗಳನ್ನು ಆಂಗ್ಲ ಭಾಷೆಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳು, ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರಿಂದ ಮಾಹಿತಿ ಪಡೆಯಬಹುದಾಗಿದೆ ಎಂದು  ತಿಳಿಸಿದೆ.

Related posts

Leave a Comment