ಪಲ್ಟನ್ ಒಣಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಹಿಟ್ನಾಳ್ ಚಾಲನೆ.

ಕೊಪ್ಪಳ.ನ.೨೪
ನಗರದ ನಾಲ್ಕನೆ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಮಂಜುಮ್ ಪಲ್ಟನ್ ಒಣಿಯಲ್ಲಿ
ಸಿ.ಸಿ.ರಸದತೆ, ಚರಂಡಿ ಮತ್ತು ಮಾಂಸದ ಅಂಗಡಿಗಳ ಕಟ್ಟಡ ಸೇರಿದಂತೆ ವಾರ್ಡಿನ ಸಂಪೂರ್ಣ
ಅಭೀವೃಧ್ಧಿ ಕಾಮಗಾರಿಗಳಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ರವರು ಚಾಲನೆ ನೀಡಿದರು.
   
ನಗೆಸಭೆಯ ೧೩ನೇ ಹಣಕಾಸಿನ ೨೦೧೩-೧೪ನೇ ಸಾಲಿನ ಅನುದಾನ ೩೦.೦೦ ಲಕ್ಷ ರೂ. ವ್ಯಚ್ಛದಲ್ಲಿ ಈ
ಎಲ್ಲಾ ಕಾಮಗಾರಿಗಳು ವಾರ್ಡಿನಲ್ಲಿ ಜರುಗಲಿದ್ದು, ಗುಣಮಟ್ಟದ ಕಾಮಗಾರಿ ಮಾಡಿ ನೀಗಧಿತ
ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಭಂಧಿಸಿದ ಗುತ್ತಿಗೆದಾರರಿಗೆ ಶಾಸಕರು ಸೂಚನೆ
ನೀಡಿದರು.
    ಈ ಸಂಧರ್ಬದಲ್ಲಿ ನಗರಾಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್
ಜುಲ್ಲುಖಾದರ್ ಖಾದ್ರಿ, ನಗರಸಭೆಯ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಅಮ್ಜದ್ ಪಟೇಲ್
ನಗರಸಭಾ ಸದಸ್ಯ ಮಹೇಶ ಭಜಂತ್ರಿ, ಕೆ.ಎಮ್, ಸಯ್ಯದ್, ಜಾಕೀರದ ಕಿಲ್ಲೆದಾರ್, ಗುರುರಾಜ
ಹಲಗೇರಿ, ಬಾಷುಸಾಬ್ ಖತೀಬ್, ಎಮ್.ಜಹೀರ ಅಲಿ, ಅಬ್ದುಲ್ ಅಜೀಜ್ ಮಾನ್ವಿಕರ್, ಸಯ್ಯದ್
ಖಾದ್ರಿ, ಗಫ್ಫಾರ್ ಬೇಪಾರಿ, ಜಬ್ಬಾರ್ ಬೇಪಾರಿ ಸೇರಿದಂತೆ ಒಣಿಯ ಹೀರಿಯರು ಸಂಘಟಣೆಗಳ
ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply