You are here
Home > Koppal News > ಇಂದಿನ ಯುವಕರೇ ಭವಿಷ್ಯದ ಆಶಾಕಿರಣ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಇಂದಿನ ಯುವಕರೇ ಭವಿಷ್ಯದ ಆಶಾಕಿರಣ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ-೧೭, ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ರೂ.೧೫ ಲಕ್ಷದ ಮಲ್ಟಿಜಿಮ್ ಉದ್ಘಾಟನೆ ನೇರವೇರಿಸಿ ಮಾತನಾಡಿದ ಶಾಸಕ.ಕೆ.ರಾಘವೇಂದ್ರ ಹಿಟ್ನಾಳರವರು ಜಿಲ್ಲೆಯಲ್ಲಿಯೇ ಪ್ರಥಮ ಕೊಪ್ಪಳ ನಗರದ ಪದವಿ ಕಾಲೇಜಿನಲ್ಲಿ ಸರ್ಕಾರವು ಉನ್ನತಮಟ್ಟದ ಜಿಮ್ ಮಂಜೂರು ಮಾಡಿದ್ದು, ಯುವಕರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಶಾರೀರಿಕ ಹಾಗೂ ಬೌದ್ಧಿಕ ಬೆಳವಣೆಗೆ
    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ್, ಮುತ್ತುರಾಜ ಕುಷ್ಟಗಿ, ಹೇಮಣ್ಣ ದೇವರಮನಿ, ಮಾನ್ವಿಪಾಷಾ, ವಾಹೀದ್ ಸೂಂಪುರ, ಶಿವಾನಂದ ಹೂದ್ಲೂರು, ವೀರಣ್ಣ ಸಂಡೂರು, ಕ್ರೀಡಾ ಉಪನಿರ್ದೇಶಕಿ ಡಾ|| ಎಮ್. ಶಾಂತಾ, ಪ್ರಾಂಶುಪಾಲರಾದ ಜಿ.ಶಾಂತಪ್ಪ, ಉಪನ್ಯಾಸಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

ಗೆ ಕ್ರೀಡೆ ಅತ್ಯವಶ್ಯಕವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು. ಸರ್ಕಾರವು ಶಿಕ್ಷಣದ ಜೋತೆಗೆ ಕ್ರೀಡೆಗೂ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳದ ಕೀರ್ತಿಯನ್ನು ಹೆಚ್ಚಿಸಬೇಕು. ಜಿಲ್ಲೆಯು ೩೭೧ಕಲಂಗೆ ಒಳಪಡುವುದರಿಂದ ಇಲ್ಲಯೇ ಹೆಚ್ಚಿನ ಉದ್ಯೋಗ ಅವಕಾಶಗಳು ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಪಾಲಕರ ಆಸಗಳನ್ನು ನೇರವೇರಿಸಬೇಕೆಂದು ಕೆರ ನೀಡಿದರು.

Leave a Reply

Top