ಪ್ರವೀಣ ಕುಮಾರರವರನ್ನು ಮೈಸೂರ ನಗರದಿಂದ ಗಡಿ ಪಾರು ಆದೇಶ ಹೋರಡಿಸಿರುವ ಮೈಸೂರ ನಗರ ಪೊಲೀಸ್ ಆಯುಕ್ತಕರ ದೌರ್ಜನ್ಯ ಖಂಡಿಸಿ.

ಕೊಪ್ಪಳ-21-  ನಗರದ ಬಸವೆಶ್ವರ ವೃತ್ತದಲ್ಲಿ ಇಂದು ಬೆಳಿಗ್ಗೆ ಕರವೇ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷರಾದ     ಪ್ರವೀಣಕುಮಾರವರನ್ನು ದುರುದ್ದೇಶದಿಂದ ರೌಡಿಶೀಟರ್ ಮಾಡುವುದರ ಜೊತೆಗೆ ಮೈಸೂರು ನಗರದಿಂದ ಗಡಿಪಾರು ಆದೇಶ ಹೊರಡಿಸಿರುವ ಮೈಸೂರು ನಗರ ಪೊಲೀಸ್ ಅಧಿಕಾರಿಗಳ ಆಯುಕ್ತರ ಧೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಲಾಯಿತು.
    ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ಡ, ಕನ್ನಡಿಗ, ಕರ್ನಾಟಕದ ಸಾರ್ವಭೌಮತೆಯನ್ನು ಕಾಪಾಡಲು ಕಳೆದ ೧೫ ವರ್ಷಗಳಿಂದ ಸಂಘಟನಾತ್ಮಕವಾಗಿ ನಮ್ಮ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ದುಡಿಯುತ್ತಾ ಬಂದಿದ್ದಾರೆ. ನಾಡಿನಾದ್ಯಂತ ಕರವೇ ಕಾರ್ಯಕರ್ತರು ಣಾಡುನುಡಿಗೆ ಧಕ್ಕೆ ಬಂದಾಗ ಪ್ರತಿಭಟನೆಗಳನ್ನು ನಡೆಸಿ ಪೊಲೀಸರು ಃಆಕುವ ಸುಳ್ಳು ಪ್ರಕರಣಗಳಿಗೆ ಕೆಲವು ಸಂದರ್ಭಗಳಲ್ಲಿ ಸೆರೆಮನೆಗೂ ಹೊಗಿಬಂದಿರುವುದು ಸೂಜಿಗದ ಸಂಗತಿ. ಋಆಜ್ಯ ಸರ್ಕಾರವನ್ನಾಳುವ ಪ್ರಭುಗಳ ಓಲೈಸಿಕೊಳ್ಳುವುದಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳು ನಾಡಪರ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಕ.ರ.ವೇ ಕೊಪ್ಪಳ ಜಿಲ್ಲಾ ಘಟಕ ಖಂಡಿಸುತ್ತದೆ.
 ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ರಾಜ್ಯ ಸರ್ಕಾರವು ಕೂಡಲೇ
ಹಿಂಪಡೆಯಲೇ ಬೇಕು. ಇಲ್ಲವಾದಲ್ಲಿ ರಸ್ತೆ ತಡೆ ಜಿಲ್ಲಾ ಕೇಂದ್ರ ಬಸ್ ಹಾಗೂ ಇನ್ನಿತರ
ಉಗ್ರಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಈ ಪ್ರತಿಭಟನೆಯ ಮೂಲಕ ಕರವೇ
ಕಾರ್ಯಕರ್ತರು ಪ್ರತಿಭಟನೆಯ ಮೂಲಕ ರಾಜ್ಯ ಸಕಾರವನ್ನು ಎಚ್ಚರಿಸಲು ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಲಾಯಿತು.   ಹೆಮ್ಮೆಯ ಕನ್ನಡದ ಹೊರಾಟಗಾರನಾಗಿರುವ ಮೈಸೂರಿನ ಪ್ರವೀಣನ ಮೇಲೆ ಇರುವ ಗಡಿಪಾರು ವಾಪಸ್ ತಗೆಯಬೇಕು ಅವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು.
ಈ ಸಂದಭದಲ್ಲಿ ಬಸನಗೌಡ ಪೋ||ಪಾ ಜಿಲ್ಲಾಧ್ಯಕ್ಷರು, ಗಿರೀಶಾನಂದ ಜ್ಞಾನಸುಂದರ ಜಿಲ್ಲಾ ಸಂಚಾಲಕರು, ಪ್ರವೀಣ ಬ್ಯಾಹಟ್ಟಿ ಜಿಲ್ಲಾ ಉಪಾಧ್ಯಕ್ಷರು, ಸುರೇಶ ಪಾಟೀಲ್ ಜಿಲ್ಲಾ ಉಪಾಧ್ಯಕ್ಷರು, ಹನುಮಂತಪ್ಪ ಬೆಸ್ತರ ಕೊಪ್ಪಳ ತಾಲೂಕ ಅಧ್ಯಕ್ಷರು, ಬಸವರಾಜ ಕ್ಯಾತಪನವರ ಯಲಬುರ್ಗಾ ತಾಲೂಕ ಅಧ್ಯಕ್ಷರು, ಆದಪ್ಪ ಉಳಾಗಡ್ಡಿ ಕುಷ್ಟಗಿ ತಾಲೂಕ ಅಧ್ಯಕ್ಷರು, ಆಸೀಫ್ ಹುಸೇನೆ ಗಂಗಾವತಿ ತಾಲೂಕ ಅಧ್ಯಕ್ಷರು, ಜನ್ನತಬಿ ರಾಜೂರ ಕೊಪ್ಪಳ ಮಹಿಳಾ ತಾಲೂಕ ಅಧ್ಯಕ್ಷರು, ಸಂಜಯ ಕಟವಟಿ ಕೊಪ್ಪಳ ತಾಲೂಕ ಕಾರ್ಯದರ್ಶಿ, ಪ್ರಕಾಶ ಮನ್ನೆರಾಳ, ಜೆ.ಪಂಪಣ್ಣ ಮೌಸೂರ, ಸಂಜಯ ಶಿರಗುಪ್ಪ, ಕಳಕಪ್ಪ ಬಿ ಗೆಜ್ಜೆ, ನವೀನ ಬಿಡದಾಳ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error