ಫೆ. ೨೧ ರಂದು ಕೊಪ್ಪಳದಲ್ಲಿ ‘ಜನಪರ’ ಉತ್ಸವ.

ಕೊಪ್ಪಳ,ಫೆ.೧೯ (ಕ.ವಾ.)  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶೇಷ ಘಟಕ ಯೋಜನೆಯಡಿ ‘ಜನಪರ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಫೆ. ೨೧ ರಂದು ಸಂಜೆ ೦೪ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಆಯೋಜಿಸಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಜನಪರ ಉತ್ಸವದ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು.  ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ್ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
     ಜನಪರ ಉತ್ಸವದ ಅಂಗವಾಗಿ ಸಂಜೆ ೦೪ ಗಂಟೆಯಿಂದ ಬಿನ್ನಾಳದ ಯಮನೂರಪ್ಪ ಭಜಂತ್ರಿ ತಂಡದಿಂದ ಹಲಗೆ ವಾದನ, ಹಂಚಿನಾಳದ ದೇವಪ್ಪ ಭಜಂತ್ರಿ ತಂಡದಿಂದ ಕಣಿ ಹಲಗೆ ವಾದನ, ಕನಕಗಿರಿಯ ಬಸವರಾಜ ದಾಲ್‌ಪಟ್ ತಂಡದಿಂದ ಮೋಜಿನ ಗೊಂಬೆಗಳು ಕಾರ್ಯಕ್ರಮ ಜರುಗಲಿವೆ.  ಸಂಜೆ ೫ ಗಂಟೆಯಿಂದ ಕುದರಿಮೋತಿಯ ಹನುಮಂತರಾವ್ ಮುಧೋಳ್‌ರಿಂದ ಕೊಳಲು ವಾದನ, ಮಾರೆಪ್ಪ ಮಾರೆಪ್ಪ ದಾಸರ್ ಅವರಿಂದ ತತ್ವಪದಗಳು, ವಿರುಪಾಕ್ಷಪ್ಪ ಅವರಿಂದ ಸುಡುಗಾಡು ಸಿದ್ದರ ಕೈಚಳಕ, ಇಟಗಿಯ ಪಾರವ್ವ ಲಚ್ಚಪ್ಪ ಲಮಾಣಿ ತಂಡದಿಂದ ಲಂಬಾಣಿ ನೃತ್ಯ, ಮರಿಯಪ್ಪ ಚಾಮಲಾಪುರ ಅವರಿಂದ ಜಾನಪದ ಗೀತೆಗಳು, ಶಂಕರ ಬಿನ್ನಾಳ ರಿಂದ ಹಾರ್ಮೋನಿಯಂ ಸೋಲೋ, ಲಕ್ಷ್ಮವ್ವ ಆಡೂರು ಅವರಿಂದ ಗೀಗೀ ಪದಗಳು, ಭಾಗ್ಯನಗರದ ಪಾಂಡುರಂಗ ಮ್ಯಾಗಳಮನಿ ರಿಂದ ನೃತ್ಯ ಪ್ರದರ್ಶನ, ಕೊಪ್ಪಳದ ಬಸವರಾಜ ಮಾಲಗಿತ್ತಿ ತಂಡದಿಂದ ಸಮೂಹ ನೃತ್ಯ, ಕವಲೂರಿನ ದೊಡ್ಡನಿಂಗಪ್ಪ ಸುಂಕಣ್ಣನವರ್‌ರಿಂದ ರಂಗಗೀತೆಗಳು, ಬೆಣಕಲ್‌ನ ನೀಲವ್ವ ಮತ್ತು ತಂಡದಿಂದ ಸಂಪ್ರದಾಯ ಪದಗಳು, ಮಾರುತಿ ಬಿನ್ನಾಳರಿಂದ ಸುಗಮ ಸಂಗೀತ, ಬಿಜಕಲ್‌ನ ಅಕ್ಕಮಹಾದೇವಿ ಚನ್ನದಾಸರ ಅವರಿಂದ ಜಾನಪದ ಸಂಗೀತ ಹಾಗೂ ಪಟ್ಟಲಚಿಂತಿಯ ಯಮನೂರಪ್ಪ ಭಜಂತ್ರಿ ಅವರಿಂದ ವಚನ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.
Please follow and like us:
error