ಸ್ವ-ಉದ್ಯೋಗ ತರಬೇತಿ : ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಅರ್ಜಿ ಆಹ್ವಾನ

ಕೊಪ್ಪಳ, ಏ.೦೪   ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಳಿಯಾಳ ಇವರಿಂದ ಹನಿ ನೀರಾವರಿ ಸಲಕರಣೆಗಳ ಅಳವಡಿಕೆ ಮತ್ತು ನಿರ್ವಹಣೆ ತರಬೇತಿ ಹಾಗೂ ವೆಬ್ ಡಿಸೈನಿಂಗ್ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 
  ಹನಿ ನೀರಾವರಿ ಸಲಕರಣೆಗಳ ಅಳವಡಿಕೆ ಮತ್ತು ನಿರ್ವಹಣೆ ತರಬೇತಿ ಏಪ್ರಿಲ್ ೧೫ ರಿಂದ ಆರಂಭವಾಗಲಿದ್ದು, ಏ.೨೭ ರಿಂದ ವೆಬ್ ಡಿಸೈನಿಂಗ್ ತರಬೇತಿ ಆರಂಭವಾಗಲಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ೧೮ ರಿಂದ ೪೫ ವರ್ಷದೊಳಗಿನ ಆಸಕ್ತ, ಅರ್ಹ, ನಿರುದ್ಯೋಗಿ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದು. ದ್ವಿತೀಯ ಪಿ.ಯು.ಸಿ ಪಾಸಾದ ಹಾಗೂ ಕಂಪ್ಯೂಟರ್ ಜ್ಞಾನವುಳ್ಳವರು ಮಾತ್ರ ವೆಬ್‌ಡಿಸೈನಿಂಗ್ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.  ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ತಮ್ಮ ಸ್ವವಿವರವುಳ್ಳ ಮಾಹಿತಿಯ ಜೊತೆಗೆ ಪಡೆಯಲಿಚ್ಚಿಸುವ ತರಬೇತಿಯ ಹೆಸರನ್ನು ಬಿಳಿ ಹಾಳೆಯಲ್ಲಿ ಬರೆದು ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ(ರಿ), ದಾಂಡೇಲಿ ರಸ್ತೆ, ಹಳಿಯಾಳ-೫೮೧೩೨೯ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೮೪-೨೨೦೮೦೭, ೯೪೮೨೧೮೮೭೮೦, ೯೪೮೩೪೮೫೪೮೯ ನ್ನು ಸಂಪರ್ಕಿಸಬಹುದು 
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ವತಿಯಿಂದ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
  ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿಯು ಏ.೧೬ ರಿಂದ ಮೇ.೩೦ ರವರೆಗೆ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ೧೮ ರಿಂದ ೪೫ ವರ್ಷದೊಳಗಿನ ಆಸಕ್ತ, ಅರ್ಹ, ನಿರುದ್ಯೋಗಿ ಯುವಕರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಏ.೧೩ ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್‌ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ, ಹಳಿಯಾಳ(ಉ.ಕ)-೫೮೧೩೨೯ ಈ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೨೮೪-೨೨೦೮೦೭, ೯೪೮೨೧೮೮೭೮೦, ೯೪೮೩೪೮೫೪೮೯ ನ್ನು ಸಂಪರ್ಕಿಸಬಹುದು ಎಂದು.

Leave a Reply