ಕೊಪ್ಪಳ ತಾಲೂಕು ಹಲಗೇರಿ ಗ್ರಾಮ ಪಂಚಾಯತಿ ಬಿಜೆಪಿ ಪಾಲು..

ಕೊಪ್ಪಳ ಜಿಲ್ಲಾ ವಕ್ತಾರರಾದ ಚಂದ್ರಶೇಖರ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಹಲಗೇರಿ ಗ್ರಾಮ ಪಂಚಾಯತಿಯ ದಿ: ೨೭/೦೬/೨೦೧೫ ರಂದು ದೇವಪ್ಪ ಬಸಪ್ಪ ಓಜನಹಳ್ಳಿ ಇವರನ್ನು ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಹಾಗೂ ಸರ್ವಮಂಗಳ ಶರಣಯ್ಯ ಹಿರೇಮಠ ಇವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲಾ ಹಲಗೇರಿಯ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಹಲಗೇರಿಯ ತಾಲೂಕು ಪಂಚಾಯತಿಯ ಸದಸ್ಯರಾದ ದೇವಪ್ಪ ಗುಡ್ಲಾನೂರ, ಮಾಜಿ ಪಿ.ಎಲ್.ಡಿ ಬ್ಯಾಂಕ್ ಡೈರೆಕ್ಟರಾದ ಬಸವರಾಜ ಸಜ್ಜನ, ಮಾಜಿ ಗ್ರಾಂ.ಪಂ ಅಧ್ಯಕ್ಷರಾದ ಶಿವಪ್ಪ ಗುಡ್ಲಾನೂರ, ಊರಿನ ಹಿರಿಯರಾದ ತಿಪ್ಪಯ್ಯ ಹಿರೇಮಠ, ಈರಯ್ಯ ಹಿರೇಮಠ, ವೀರನಗೌಡ ಹಳೇಮನಿ, ದೇವಪ್ಪ ಮೊರಗೇರಿ, ಹನುಮಂತಪ್ಪ ತಳವಾರ, ಶರಣಪ್ಪ ಬಿನ್ನಾಳ, ಯಮನೂರಪ್ಪ ಬಾರಕೇರ, ದೇವಪ್ಪ ಈರಪ್ಪ ಬಾರಕೇರ, ಹನುಮಂತಪ್ಪ ಸಿದ್ದಪ್ಪ ಅಬ್ಬಿಗೇರಿ, ಉಮೇಶ ಮಂಡಲಗೇರಿ, ಜಗದೀಶ ಓಜನಹಳ್ಳಿ, ಶರಣಪ್ಪ ಉತ್ತಂಗಿ,  ಬಸವರಾಜ ತಳಕಲ್, ಸೋಮಪ್ಪ ಮ್ಯಾಗಳಮನಿ, ಅಂದಪ್ಪ ಹೂಗಾರ, ಸುಭಾಷ ಹೂಗಾರ, ಶಿವಪ್ಪ  ಹಡಪದ, ಶರಣಪ್ಪ ತಳವಾರ, ಮಲ್ಲಪ್ಪ ಹ್ಯಾಟಿ ಮತ್ತು ವದಗನಾಳ, ಹಣವಾಳ ಗ್ರಾಮದ ಗುರು ಹಿರಿಯರು ಧನ್ಯವಾದಗಳನ್ನು  ಅರ್ಪಿಸುತ್ತಾ ಮತ್ತು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕರಡಿ ಸಂಗಣ್ಣ ಮತ್ತು ಕರ್ನಾಟಕ  ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಪ್ರಹ್ಲಾದ ಜೋಶಿ ಮತ್ತು ವಿರೋಧ ಪಕ್ಷ ನಾಯಕರು ಮಾಜಿ ಮುಖ್ಯಮಂತ್ರಿಗಳು ನೂತನವಾಗಿ ಆಯ್ಕೆಯಾದ   ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೊಪ್ಪಳ ತಾಲೂಕು ಬಿಜೆಪಿ ಎಸ್.ಟಿ ಮೋರ್ಚಾ  ಉಪಾಧ್ಯಕ್ಷ ದೇವಪ್ಪ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error