ಅಂತರಾಷ್ಟ್ರೀಯ ಕರಾಟೆ ಚಾಂಪಿಯನಷಿಪ್ ಥೈಲ್ಯಾಂಡ್‌ಗೆ ಮೌನೇಶ ಎಸ್.ಬಿ.ಆಯ್ಕೆ.

ಕೊಪ್ಪಳ –

ಇದೇ ಜುಲೈ-೨೬ ರಿಂದ ಜುಲೈ-೩೦ ರವರೆಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನ ಹುಮಾರ್ಕ್ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನಷಿಪ್‌ಗೆ ಕೊಪ್ಪಳದ ಭೂಮಿ ಫೌಂಡೇಶನ್‌ನ ಮುಖ್ಯಸ್ಥ ಮೌನೇಶ ಎಸ್.ವಡ್ಡಟ್ಟಿ ಅವರು ಆಯ್ಕೆಯಾಗಿದ್ದಾರೆ ಎಂದು ಗುಜರಾತ್‌ನ ವಾಡೋರಿಯೋ ಕರಾಟೆ ಡೂ ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಖಾಸೀಂ ದಾವ್ ಅವರು ತಿಳಿಸಿದ್ದಾರೆ.ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದಿಂದ ಸುಮಾರು ೫೦ ಜನ ಕರಾಟೆಪಟುಗಳು ಭಾಗವಹಿಸಲಿದ್ದು, ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಮೌನೇಶ ಎಸ್.ವಡ್ಡಟ್ಟಿ ಸ್ಪರ್ಧಿಸಲಿದ್ದಾರೆ. ಮೌನೇಶ ಎಸ್.ವಡ್ಡಟ್ಟಿ ಅವರು ಈ ಹಿಂದೆ ೨೦೧೧-೧೨ ರಲ್ಲಿ ಮಲೇಶಿಯಾ ಹಾಗೂ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿ ಪದಕವನ್ನು ಪಡೆದು ಕರ್ನಾಟಕ ರಾಜ್ಯಕ್ಕೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದರು. ಈಗ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನಷಿಪ್‌ನಲ್ಲಿ ಪಾಲ್ಗೊಂಡು ಜಯಶಾಲಿಯಾಗಿಬರಲೆಂದು ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲೆಯ ಎಲ್ಲಾ ಕರಾಟೆ ಪಟುಗಳು ಶುಭ ಹಾರೈಸಿದ್ದಾರೆ.

Leave a Reply