೬ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ :

ಕೊಪ್ಪಳ ೦೬ : ಭಾಗ್ಯನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆ.ಹೆಚ್.ಡಿ.ಸಿ.ಕಾಲೋನಿಯಲ್ಲಿ ದಿ: ೦೪-೦೩-೨೦೧೪ರಂದು ಸರಸ್ವತಿ ಪೂಜೆ ಹಾಗೂ ೬ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯರಾದ ವನಿತಾ ಗಡಾದರವರು ಸರಕಾರಿ ಶಾಲೆಯಲ್ಲಿಯೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲು ಇಂಥ ಸಾಂಕ್ಕೃತಿಕ ಹಾಗೂ ಕ್ರ್ರೀಡಾ ಚಟುವಟಿಕೆಗಳು ಮಕ್ಕಳಲ್ಲಿನ ಸೂಪ್ತ ಪ್ರತೀಭೆಯನ್ನು ಹೊರ ಹಾಕಲು ಉತ್ತಮ ವೇದಿಕೆಯಾಗುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಹೊನ್ನೂರಸಾಬ ಭೈರಾಪೂರ ರವರು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯರಾದ ದಾನಪ್ಪ. ಜಿ. ಕವಲೂರ, ಶ್ರೀನಿವಾಸ ಹ್ಯಾಟಿ, ಗ್ರಾ. ಪಂ. ಉಪಾಧ್ಯಕ್ಷರಾದ ಹುಲಿಗೆಮ್ಮ ನಾಯಕ, ಸದಸ್ಯರಾದ ರಮೇಶ ಹ್ಯಾಟಿ, ಚಂದ್ರು ಉಂಕಿ, ಮಂಜುನಾಥ ಹೊಸಪೇಟೆ, ಸುರೇಶ ದರಗದಕಟ್ಟಿ, ಕ.ರಾ.ಸ.ನೌ.ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ಕ.ರಾ.ಪ್ರಾ.ಶಾ.ಶಿ.ಸಂಘದ ತಾಲೂಕ ಅಧ್ಯಕ್ಷರಾದ ಮಂಜುನಾಥ ಬಿ.,  ಸಿ.ಆರ್.ಪಿ. ವೀರೇಶ ಕರಮುಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೊಟ್ರಪ್ಪ ಹುಲ್ಲತ್ತಿ, ಉಪಾಧ್ಯಕ್ಷೆ ರೇಣುಕಾ ಸಾಲ್ಮನಿ, ಮುಖೋಪಾಧ್ಯಾಯ ವೀರೇಶ ಹುಲ್ಲೂರ, ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು|| ಭುಮಿಕಾ, ಉಮಾ, ಹಾಗೂ ದ್ರಾಕ್ಷಾಯಿಣಿ, ಪ್ರಾರ್ಥನೆಯನ್ನು ಮಾಡಿದರು.   ಸಹ ಶಿಕ್ಷಕಿ ನಂದಿನಿಯವರು ಸ್ವಾಗತಿಸಿದರು.  ಸಹ ಶಿಕ್ಷಕಿ ತುಳಜಾಬಾಯಿ ವಂದಿಸಿದರು.  ಮುಖ್ಯೋಪಾಧ್ಯಾಯ ವೀರೇಶ ಹುಲ್ಲೂರ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.  ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಕ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply