You are here
Home > Koppal News > ಸ್ವಾಮಿ ವಿವೇಕಾನಂದರ ಪುಣ್ಯ ತಿಥಿ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮ

ಸ್ವಾಮಿ ವಿವೇಕಾನಂದರ ಪುಣ್ಯ ತಿಥಿ ನಿಮಿತ್ಯ ಸಸಿ ನೆಡುವ ಕಾರ್ಯಕ್ರಮ

ಡಿವೈನ್ ಪಾರ್ಕ ಟ್ರಸ್ಟ್ (ರಿ), ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ಡಿವೈನ್ ಸ್ಪಾರ್ಕ, ಕೊಪ್ಪಳ ಶಾಖೆ ೦೪”ನಿವೇದಿತಾ ಶಾಲೆ” ಕೊಪ್ಪಳ ಇವರ ಸಂಯುಕ್ತ ಆಶ್ರಯಯದಲ್ಲಿ ಸ್ವಾಮಿ ವಿವೇಕಾನಂದರ ೧೧೦ ನೇಪುಣ್ಯತಿಥಿಯನ್ನು ಶಾಲೆಯಲ್ಲಿ ಹಾಗೂ ಹಮಾಲರ ಕಾಲೋನಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸದ್ರಿ ಶಾಲೆಯ ಸಂಸ್ಥಾಪಕಿ ಅಧ್ಯಕ್ಷರಾದ ಶ್ರೀಮತಿ ಶಾರದಾಬಾಯಿ ಹಾಗೂ ಕಾರ್ಯದರ್ಶಿ ಶ್ರೀ ವೆಂಕಟೇಶ ಪುಲಸ್ಕರ ಶಾಲಾ ಶಿಕ್ಷಕರು ವಿಧ್ಯಾರ್ಥಿಗಳೊಂದಿಗೆ ಕಾರ್ಯಕ್ರಮಕ್ಕೆ ತುಂಬು ಹೃದಯದಿಂದ ಸಹಕಾರ ನೀಡಿದರು.
ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಪ್ಪ ಶೆಟ್ಟರ ಅಧ್ಯಕ್ಷರು, ನಂದಿಶ್ವರ ಶಾಲೆ ಕೊಪ್ಪಳ ಇವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಎಂ.ಹೆಚ್.ವಾಲ್ಮೀಕಿಯವರು ಸ್ವಾಮಿ ವಿವೇಕಾನಂದ ಜೀವನದ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು. ಹಾಗೂ ಶಿ.ಸಿ.ವಿ.ಕಲ್ಮಠರವರು ವಂದನಾರ್ಪಣೆ ಮಾಡಿದರು.
ನಿಜಗುಣಪ್ಪಕೊರ್ಲಳ್ಳಿ ಅಧ್ಯಕ್ಷರು, ಲಕ್ಷ್ಮಿನಾರಾಯಣ ಉಪಾಧ್ಯಕ್ಷರು, ಕೊಪ್ಪಳ ಶಾಖೆ, ಕೊಟ್ರಪ್ಪ ಅಂಗಡಿ, ವೀರಭದ್ರಯ್ಯ ಭನ್ನಿಮಠ, ಬಸಲಿಂಗಪ್ಪ ಲಾಡಿ, ಈಶಪ್ಪ ಸುಂಕದ, ಡಿ.ಕೃಷ್ಣಮೂತಿ, ಕಳಕಪ್ಪ ಕುಡಗುಂಟಿ ಹಾಗೂ ಸಿದ್ದಾರ್ಥ.ಹೆಚ್. ಬಳಗದ ಸದಸ್ಯರು ಉಪಸ್ಥಿತರಿದ್ದರು.

Leave a Reply

Top