ಗ್ರಂಥಾಲಯಗಳಿಗೆ ಪುಸ್ತಕಗಳ ಸರಬರಾಜು ಲೇಖಕ, ಪ್ರಕಾಶಕರಿಂದ ಅರ್ಜಿ ಆಹ್ವಾನ.

ಕೊಪ್ಪಳ,
ಆ.೧೭ (ಕ ವಾ) ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ
ಮಂಡಳಿ ವತಿಯಿಂದ ಪ್ರಸಕ್ತ ಸಾಲಿನ ಹೆಚ್.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಗ್ರಾಮ
ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಹೈದ್ರಾಬಾದ್ ಕರ್ನಾಟಕ ಭಾಗದ ಲೇಖಕರು ಬರೆದ
ಪುಸ್ತಕಗಳನ್ನು ಹಂತ ಹಂತವಾಗಿ ಸರಬರಾಜು ಮಾಡಲು ಲೇಖಕರು ಅಥವಾ ಪ್ರಕಾಶಕರಿಂದ ಅರ್ಜಿ
ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಹೈದ್ರಾಬಾದ್ ಕರ್ನಾಟಕ ಭಾಗದ ಲೇಖಕರು ಕಳೆದ
ಹತ್ತು ವರ್ಷಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬರೆದ ಪುಸ್ತಕಗಳನ್ನು ಹಂತ
ಹಂತವಾಗಿ ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಲೇಖಕರು ಅಥವಾ ಪ್ರಕಾಶಕರು ಅರ್ಜಿ
ಸಲ್ಲಿಸಬಹುದಾಗಿದೆ. ಪುಸ್ತಕ ಬರೆದ ಲೇಖಕರು ಕಡ್ಡಾಯವಾಗಿ ಹೈದ್ರಾಬಾದ್ ಕರ್ನಾಟಕ
ವಿಭಾಗದವರಾಗಿರಬೇಕು. ಅರ್ಜಿ ನಮೂನೆಯಲ್ಲಿ ಪುಸ್ತಕದ ಕ್ರಮ ಸಂಖ್ಯೆ, ಪುಸ್ತಕದ
ಹೆಸರು, ಲೇಖಕರ ಹೆಸರು ಮತ್ತು ವಿಳಾಸ, ಪ್ರಕಾಶಕರ ಹೆಸರು ಹಾಗೂ ವಿಳಾಸ, ಪ್ರಕಟಣೆಗೊಂಡ
ವರ್ಷ ಮತ್ತು ಮುದ್ರಿತ ಪ್ರತಿಗಳ ಸಂಖ್ಯೆ(ಪುಸ್ತಕ ಪ್ರತಿ ಲಗತ್ತಿಸುವುದು), ಪುಸ್ತಕಗಳ
ಮರುಮುದ್ರಣ ಸಂಖ್ಯೆ, ಪುಸ್ತಕದ ದರ, ರಿಯಾಯಿತಿ ದರ ಸೇರಿದಂತೆ ಪುಸ್ತಕಗಳ ವಿವರಗಳನ್ನು
ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಹಾಗೂ ಅದರೊಂದಿಗೆ ಪ್ರತಿಯೊಂದು ಪುಸ್ತಕದ ಪ್ರತಿ
ಲಗತ್ತಿಸಬೇಕು. ಪುಸ್ತಕದ ಪ್ರತಿ ಲಗತ್ತಿಸದೇ ಇದ್ದಲ್ಲಿ ಹಾಗೂ ಅರ್ಜಿಯಲ್ಲಿನ ಮಾಹಿತಿ
ಅಪೂರ್ಣವಾಗಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.  ನಿಗದಿತ
ಅರ್ಜಿಯನ್ನು ಭರ್ತಿ ಮಾಡಿ, ೩೭೧-ಜೆ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹಾಗೂ
ಕಡ್ಡಾಯವಾಗಿ ಪುಸ್ತಕದ ಒಂದು ಪ್ರತಿಯನ್ನು ಲಗತ್ತಿಸಿ, ಆ.೩೧ ರೊಳಗಾಗಿ ಕಾರ್ಯದರ್ಶಿಗಳು,
ಹೈದ್ರಾಬಾದ್ ಕರ್ನಾಟಕ, ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಇವರಿಗೆ
ಸಲ್ಲಿಸಬಹುದಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಸರಬರಾಜು ಪ್ರಕಾಶಕರಿಂದ ಅರ್ಜಿ ಆಹ್ವಾನ.
ಕೊಪ್ಪಳ,
ಆ.೧೭ (ಕ ವಾ) ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ
ಮಂಡಳಿ ವತಿಯಿಂದ ಪ್ರಸಕ್ತ ಸಾಲಿನ ಹೆಚ್.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ಗ್ರಾಮ
ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಂಬಂಧಿಸಿದಂತೆ ವಿವಿಧ ವಿಷಯಗಳ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಪುಸ್ತಕಗಳನ್ನು
ಸರಬರಾಜು ಮಾಡಲು ಆಸಕ್ತ ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಗ್ರಾಮ
ಪಂಚಾಯಿತಿ ಹಾಗೂ ತಾಲೂಕಾ ಗ್ರಂಥಾಲಯಗಳಿಗೆ ಗ್ರಾಮರ್, ನಿಬಂಧಗಳು, ಎಸ್.ಡಿ.ಎ,
ಎಫ್.ಡಿ.ಎ, ಪಿ.ಡಿ.ಓ, ಪಿ.ಎಸ್.ಐ, ಕೆ.ಎ.ಎಸ್, ಬ್ಯಾಂಕಿಂಗ್ ಮತ್ತು ರೈಲ್ವೆ,
ಎಸ್.ಎಸ್.ಸಿ, ಬಿ.ಇ.ಡಿ, ಡಿ.ಇ.ಡಿ, ಟಿ.ಇ.ಟಿ, ಸಿ.ಇ.ಟಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಂಬಂಧಿಸಿದ  ವಿಷಯಗಳ ಪುಸ್ತಕಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ
ಗೈಡ್‌ಗಳನ್ನು ಸರಬರಾಜು ಮಾಡಲು ಇಚ್ಛಿಸುವ ಪ್ರಕಾಶಕರು ಅರ್ಜಿ ಸಲ್ಲಿಸಬಹುದಾಗಿದೆ.
 
    ಅರ್ಜಿ ನಮೂನೆಯಲ್ಲಿ ಪುಸ್ತಕದ ಕ್ರಮ ಸಂಖ್ಯೆ, ಪುಸ್ತಕದ ಹೆಸರು, ಲೇಖಕರ ಹೆಸರು,
ಪ್ರಕಟಣೆಗೊಂಡ ವರ್ಷ, ಪುಸ್ತಕದ ದರ, ರಿಯಾಯಿತಿ ದರ ಸೇರಿದಂತೆ ಪುಸ್ತಕಗಳ ವಿವರಗಳನ್ನು
ಪ್ರತ್ಯೇಕವಾಗಿ ಪಟ್ಟಿ ಮಾಡಬೇಕು ಹಾಗೂ ಅದರೊಂದಿಗೆ ಪ್ರತಿಯೊಂದು ಪುಸ್ತಕದ ಪ್ರತಿ
ಲಗತ್ತಿಸಬೇಕು. ಪುಸ್ತಕದ ಪ್ರತಿ ಲಗತ್ತಿಸದೇ ಇದ್ದಲ್ಲಿ ಅಥವಾ ಅರ್ಜಿಯಲ್ಲಿನ ಮಾಹಿತಿ
ಅಪೂರ್ಣವಾಗಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಎಲ್ಲಾ ಪುಸ್ತಕಗಳು
ಪರೀಕ್ಷೆಗೆ ನಿಗದಿಪಡಿಸಿದ ಹೊಸಪಠ್ಯಕ್ರಮ ಹಾಗೂ ನಮೂನೆ ಅನ್ವಯ ಹೊಂದಿರಬೇಕು.
    
ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ೩೭೧-ಜೆ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ
ಹಾಗೂ ಕಡ್ಡಾಯವಾಗಿ ಪುಸ್ತಕದ ಒಂದು ಪ್ರತಿಯನ್ನು ಲಗತ್ತಿಸಿ, ಆ.೩೧ ರೊಳಗಾಗಿ
ಕಾರ್ಯದರ್ಶಿಗಳು, ಹೈದ್ರಾಬಾದ್ ಕರ್ನಾಟಕ, ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ
ಇವರಿಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. 
ಆ.೧೮ ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕೊಪ್ಪಳ, ಆ.೧೭ (ಕ ವಾ)ತಾಂತ್ರಿಕ ಕಾರಣಗಳಿಂದಾಗಿ ಆ.೧೮ ರಂದು ಕೊಪ್ಪಳ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
    
ನಗರಕ್ಕೆ ನೀರು ಸರಬರಾಜು ಮಾಡುವ ಕಾತರಕಿ ಜಾಕ್‌ವೆಲ್‌ನಿಂದ ನಗರದ ಫಿಲ್ಟರ್ ಬೆಡ್
ವರೆಗಿನ ವಿದ್ಯುತ್‌ಲೈನ್ ಅನ್ನು ಆ.೧೮ ರಂದು  ದುರಸ್ತಿಗೊಳಿಸಲಾಗುತ್ತಿದ್ದು, ಅಂದು
ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರಸಭೆಯೊಂದಿಗೆ
ಸಹಕರಿಸುವಂತೆ ಪೌರಾಯುಕ್ತ ರಮೇಶ ಪಟ್ಟೇದ್ ಕೋರಿದ್ದಾರೆ.
Please follow and like us:
error