You are here
Home > Koppal News > ಕುತಂತ್ರ ರಾಜಕೀಯಕ್ಕೆ ದೇವರಿದ್ದಾನೆ ವಾಸ್ತವ ಜನತೆಗೆ ಗೊತ್ತಿದೆ: ಸಯ್ಯದ್

ಕುತಂತ್ರ ರಾಜಕೀಯಕ್ಕೆ ದೇವರಿದ್ದಾನೆ ವಾಸ್ತವ ಜನತೆಗೆ ಗೊತ್ತಿದೆ: ಸಯ್ಯದ್

ಕೊಪ್ಪಳ,ಏ.೦೧: ಈ ಹಿಂದೆ ನಡೆಸಿದಂತೆ ಕುತಂತ್ರ ರಾಜಕೀಯ ಈ ಬಾರಿ ನಡೆಯದು ವಾಸ್ತವ್ಯ ಸತ್ಯ ಜನತೆಗೆ ಗೊತ್ತಿದೆ ಕುತಂತ್ರ ರಾಜಕೀಯ ನಡೆಸುವವರಿಗೆ ದೇವರಿದ್ದಾನೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಸಯ್ಯದ್ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಸಯ್ಯದ್ ತಿಳಿಸಿದರು.
ಅವರು ಸೋಮವಾರ ನಗರದ ಗವಿಸಿದ್ದೇಶ್ವರ ಮಠದಲ್ಲಿ ೧೦೧ ಟೆಂಗಿನಕಾಯಿ ಸೇವೆ ಮಠಕ್ಕೆ ಸಮರ್ಪಿಸಿ ನಂತರ ನಡೆದ ಗದಗ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಹಾಗೂ ಯಾವುದೇ ಪಾಲಾಪೆಕ್ಷೆ ಇಲ್ಲದೇ ಜನಪರ ಸೇವೆ ಸಲ್ಲಿಸಿದ್ದೇನೆ. ಅದೇ ರೀತಿ ಅದನ್ನು ದುರುಪಯೋಗ ಪಡಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಅಲ್ಲದೇ ಕೆಲವರು ನಮ್ಮ ಬಗ್ಗೆ ಅಪಪ್ರಚಾರಕ್ಕೆ ಮುಂದಾಗಿದ್ದರು ಜನತೆ ಅದಕ್ಕೆ ಕಿವಿಗೋಡುವುದಿಲ್ಲ ಕೆಜೆಪಿ ಪ್ರಾಮಾಣಿಕ ಕಾರ್ಯಕರ್ತರು ನನ್ನ ಬಗ್ಗೆ ಮನೆ ಮನಮುಟ್ಟಿಸುವ ಕಾರ್ಯಯಶಸ್ವಿಯಾಗಿ ನಡೆಸಲಿದ್ದಾರೆ ಎಂದು ಅವರಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನ್ನ ಬಗ್ಗೆ ಅಪಾರ ನಂಬಿಕೆ ಇಟ್ಟು ಪಕ್ಷದಿಂದ ಟಿಕೇಟ್ ನೀಡಿದ್ದಾರೆ. ಅದರಂತೆ ಇತರರನ್ನು ನಾನು ದ್ವೇಶಿಸಲಾರೆ ಅದರೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡುವದಾಗಿ ಅವರಿಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಬೂಬ ಮುಲ್ಲಾ, ರಾಜಸಾಬ ಕಿಲ್ಲೆದಾರ, ಎನ್.ಎ. ಪಾಟೀಲ್ ಸೇರಿದಂತೆ ಇತರರು ಮಾತನಾಡಿ, ಕೆ.ಎಂ. ಸಯ್ಯದ್ ಪಕ್ಷಕ್ಕೆ ಆಗಮನದಿಂದ ಕ್ಷೇತ್ರದಲ್ಲಿ ಆನೆ ಬಲ ಬಂದಂತಾಗಿದೆ ಅವರ ಜನಪರ ಕಾಳಜಿ ಹಾಗೂ ಕಾರ್ಯಗಳು ಜನತೆಯ ಮನೆ ಹಾಗೂ ಮನಮಾತಾಗಿದ್ದು ಕ್ಷೇತ್ರದಲ್ಲಿ ಅವರ ನಿಶ್ಚಳ ಗೆಲುವು ನಿಶ್ಚಿತವೆಂದರು.
ಇದೇ ವೇಳೆ ರವಿಚಂದ್ರ ಸೋಮನಗೌಡ ಮಾ.ಪಾ., ಪ್ರಪುಲ್‌ಗೌಡ, ಅರುಣ್ ವೇದಾ ಪಾಠಕ್, ಸುನೀಲ್ ಹೆಬ್ಬಸೂರು, ಶಾಮೀದ್‌ಸಾಬ್ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Top