ಉತ್ತರ ಕರ್ನಾಟಕ ಪ್ರತ್ಯೆಕ ಕೂಗಿಗೆ ಎಸ್.ಎಫ್.ಐ ವಿರೋದ

ಕೊಪ್ಪಳ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯೂ ಪತ್ರಿಕಾ ಪ್ರಕಟಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರು ಮತ್ತು ಯುವಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ಅಖಂಡ ಕರ್ನಾಟಕ ಒಡೆಯಲು ಹುನ್ನಾರ ಮಾಡುತಕ್ಕಂತ ಕೆಲ ಪಟ್ಟಭದ್ರ ಹಿತಾಶಕ್ತಿಗಳಿಗೆ ಮರಳಾಗಬಾರದೆಂದು ಹಾಗೂ ಅಖಂಡ ಕರ್ನಾಟಕ ಒಕ್ಕೂಟ ಮಾಡುವಲ್ಲಿ ಉತ್ತರ ಕರ್ಣಾಟಕದ ಅನೇಕ ಸಾಹಿತಿಗಳು, ವಿದ್ಯಾರ್ಥಿಗಳು, ಯುವಕರು, ಹೋರಾಟದ ತ್ಯಾಗದಿಂದಾಗಿ ಅಂದು ಮೈಸೂರ ಕರ್ನಾಟಕದಿಂದ ಅಖಂಡ ಕರ್ನಾಟಕವೆಂದು ನಾಮಕರಣವಾಯಿತು ಆದರೆ ಇಂದು ಅಭಿವೃದ್ಧಿ ಹೆಸರಿನಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕವಾಗಬೇಕೆಂದು ಕೆಲ ಹೋರಾಟ ಗಾರರು ಪ್ರತ್ಯೇಕತೆಯ ಕೂಗು ಹಾಕಿರುವುದು ಸರಿಯಾದ ಬೆಳವಣಿಗೆಯಲ್ಲ. ಈಬಾಗವು ಅಭಿವೃದ್ಧಿಯಲ್ಲಿ ಹಿಂದೆ ಬಿಳಲು ರಾಜಕೀಯ ವ್ಯಕ್ತಿಗಳು, ಪಟ್ಟಭದ್ರ ಹಿತಾಶಕ್ತಿಯ ಕೈವಾಡ, ಜಮೀನದಾರಿ ಪದ್ದತಿ ಹಾಗೂ ಭೂ ಮಾಲಿಕ ಪದ್ದತಿ ಕಾರಣವಾಗಿದೆ. ಹಾಗಾಗಿ ಈ ಭಾಗದ ಒಟ್ಟಾರೆ ಅಭಿವೃದ್ಧಿ ಗಾಗಿ ಜನಾಂದೋಲನ ವಾಗಬೇಕಾಗಿದ್ದು ಅಭಿವೃದ್ಧಿಗಾಗಿ ಹೋರಾಟಕ್ಕೆ ಎಸ್.ಎಫ್.ಐ ಬೆಂಬಲಿಸುತ್ತದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ರಾಜ್ಯ ವಿಭಜನೆ ಮಾಡಲು ಎಷ್ಟರ ಮಟ್ಟಿಗೆ ಸರಿ ಅಲ್ಲದೇ ಕೆಲ ಶಾಸಕರುಗಳು  ತಮ್ಮ ಸ್ವಾರ್ಥಕ್ಕಾಗಿ ಅಧಿಕಾರದ ದಾಹಕ್ಕಾಗಿ ಈ ತರದ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ವಾಸ್ತವವಾಗಿ ನಂಜುಂಡಪ್ಪ ವರದಿಯ ಪ್ರಕಾರ ಬಿಡುಗಡೆಯಾದ ಅನುದಾನ ಮತ್ತು ಹೈದ್ರಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಈತರದ ಹೇಳಿಕೆಗಳಿಗೆ ಹೋರಾಟಕ್ಕೆ ಯಾರು ಕೂಡಾ ಕಿವಿಗೊಡದೇ ಅಖಂಡ ಕರ್ನಾಟಕ ಉಳಿವಿಗಾಗಿ ಬೆಂಬಲಿಸಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ, ಜಿಲ್ಲಾ ಉಫಾಧ್ಯಕ್ಷ ಹನಮಂತ ಭಜಂತ್ರಿ, ದುರಗೇಶ ಡಗ್ಗಿ, ಜಿಲ್ಲಾ ಮುಖಂಡರುಗಳಾದ ಶಿವಕುಮಾರ, ಉಮೇಶ ರಾಠೋಡ, ವಿರೇಶ ಕುದರಿಮೋತಿ, ಪರುಶುರಾಮ ರಾಟೋಡ, ರಮೇಶ ನಾಯಕ ಇವರುಗಳು ಪ್ರಕಟಣೆಗೆ ತಿಳಿಸಿದ್ದಾರೆ.

Leave a Reply