ಮಹಾರಾಷ್ಟ್ರ ಪಠ್ಯಪುಸ್ತಕಕ್ಕೆ ವಿಮಲಾ ಇನಾಮದಾರರ ’ಆಟಪಾಠ’ ಕವಿತೆ ಆಯ್ಕೆ

ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಕನ್ನಡ ಭಾಷೆಯ ೩ ನೇ ತರಗತಿಯ ಪಠ್ಯಪುಸ್ತಕದಲ್ಲಿ ಕೊಪ್ಪಳದ ಹಿರಿಯ ಸಾಹಿತಿ ವಿಮಲಾ ಭುಜಂಗಸ್ವಾಮಿ ಇನಾಮದಾರರ ’ಬಿದಿಗೆಯ ಚಂದ’ ಮಕ್ಕಳ ಕವನ ಸಂಕಲನದಲ್ಲಿನ ’ಆಟಪಾo’ ಕವಿತೆಯನ್ನು ಆಯ್ಕೆಮಾಡಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಸಂತಸ : ವಿಮಲಾ ಭುಜಂಗಸ್ವಾಮಿ ಇನಾಮದಾರರ ’ಬಿದಿಗೆಯ ಚಂದ’ ಮಕ್ಕಳ ಕವನ ಸಂಕಲನದಲ್ಲಿನ ’ಆಟಪಾo’ ಕವಿತೆ ಆಯ್ಕೆಯಾಗಿದ್ದಕ್ಕೆ ನೇಹ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಾ. ಮಹಾಂತೇಶ ಮಲ್ಲನಗೌಡರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಎಸ್.ಎನ್. ತಿಮ್ಮನಗೌಡರ, ಈಶ್ವರ ಹತ್ತಿ, ಡಾ. ವ್ಹಿ. ಬಿ. ರಡ್ಡೇರ, ಸರ್ವಮಂಗಳಾ ಗುರನಗೌಡ ಪಾಟೀಲ ಹಲಗೇರಿ, ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ ಸಂತಸವ್ಯಕ್ತಪಡಿಸಿದ್ದಾರೆ. 

Leave a Reply