fbpx

ಸಾಮೂಹಿಕ ಖತ್ನಾ(ಮುಂಜಿ)ಶಿಬಿರಕ್ಕೆ ಮುಫ್ತಿ ನಜೀರ್ ಅಹ್ಮದ್ ತಸ್ಕೀನಿ ಚಾಲನೆ

 ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಖತ್ನಾ ಮಾಡಿಸಿಕೊಳ್ಳುತ್ತಾರೆ, ಖತ್ನಾ ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ ಮಹತ್ವ ಪಡೆದಿದೆ ಎಂದು  ಯುಸುಫಿಯಾ ಮಸೀದಿ ಪೇಶ್ ಇಮಾಮ್ ಮುಫ್ತಿ ಮೌಲಾನಾ ಮಹ್ಮದ್ ನಜೀರದ ಅಹಮ್ಮದ್ ತಸ್ಕೀನಿ ಖಾದ್ರಿಉಲ್ ಚಿಶ್ತಿ ರವರು ಹೇಳಿದರು.
 ಅವರು  ನಗರದ ಪಂಜುಮ್ ಪಲ್ಟನ್ ಓಣಿಯ ಝಂಡಾಕಟ್ಟಾ ಬಳಿ  ಹಜರತ್ ಖಾಜಾ ಗರೀಬ್ ನವಾಜ್ ಖಿದ್ಮತುಲ್ ಮುಸ್ಲಿಮೀನ್ ಕಮೀಟಿವತಿಯಿಂದ ಏರ್ಪಡಿಸಿದ ಉಚಿತ ಸಾಮೂಹಿಕ ಖತ್ನಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ಇಸ್ಲಾಂ ಧರ್ಮದಲ್ಲಿ ಖತ್ನಾ ಸುನ್ನತೆ ಇಬ್ರಾಹಿಮ್ ಎಂದು ಹೇಳಲಾಗಿದೆ. ಪೈಗಂಬರ್ ಇಬ್ರಾಹಿಂ ಅಲೈಸಲಾಮ್ (ರ) ರವರು ಇದನ್ನು ಮಾಡಿದ್ದರು ಹಾಗೂ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಇದನ್ನು ಕಡ್ಡಾಯವಾಗಿ ಮಾಡಲು ಹೇಳಿದ್ದರು. ಹೀಗಾಗಿ ಖತ್ನಾ ಧಾರ್ಮಿಕವಾಗಿ ಮಹತ್ವ ಪಡೆದಿದ್ದು, ಮುಸ್ಲಿಂ ಸಮಾಜ ಬಾಂಧವರು ಇದನ್ನು ಕಡ್ಡಾಯವಾಗಿ ಖತ್ನಾ ಮಾಡುತ್ತ ಬಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಖತ್ನಾ ಧಾರ್ಮಿಕವಾಗಿ ಅಷ್ಟೆ ಅಲ್ಲದೇ ವೈಜ್ಞಾನಿಕವಾಗಿಯೂ ಕೂಡ ಬಹಳಷ್ಟು ಮಹತ್ವ ಪಡೆದಿದೆ. ಖತ್ನಾ ಮಾಡಿಸಿದ್ದರಿಂದ ಮಾರಕ ರೋಗಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ವೈದ್ಯರು ಕೂಡ ಇದಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಹೀಗಾಗಿ ಖತ್ನಾ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಬಹಳಷ್ಟು ಮಹತ್ವ ಪಡೆದಿದ್ದು, ಇಂತಹ ಮಹತ್ವದ ಕಾರ್ಯ ಇಲ್ಲಿನ ಕಮೀಟಿಯವರು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಯುಸುಫಿಯಾ ಮಸೀದಿ ಪೇಶ್ ಇಮಾಮ್ ಮುಫ್ತಿ ಮೌಲಾನಾ ಮಹ್ಮದ್ ನಜೀರದ ಅಹಮ್ಮದ್ ತಸ್ಕೀನಿ ಖಾದ್ರಿಉಲ್ ಚಿಶ್ತಿ ರವರು ಹೇಳಿದರು.
  ಕಾರ್ಯಕ್ರಮದಲ್ಲಿ  ಸೈಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸ್ಯಯದ್ ಹಿರಿಯ ನ್ಯಾಯವಾದಿ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಪೀರಾಹುಸೇನ ಹೊಸಳ್ಳಿ, ಮೌಲನಾ ನಾಸೀರ್ ತಸ್ಕೀನಿ, ಹಾಜಿ ಗೌಸ ಸಾಬ್ ಬೇಪಾರಿ, ತಹಸಿನ್ ಬಾಬಾ ತಸ್ಕೀನಿ, ನಗರಸಭಾ ಸದಸ್ಯ ಖಾಜಾವಲ್ಲಿ ಬನ್ನಿಕೊಪ್ಪ, ಡಾ.ಹಸನ್ ಅಲಿ ನಿಂಗಾಪುರ, ಹಾಜಿ ನಬಿಸಾಬ್ ಚಟ್ನಿ, ಹಕೀಂ ಸಾಬ್, ರಹೇಮಾನ ಟೇಲರ್, ಮಹಮ್ಮದ್ ಹುಸೇನ್ ಮನಿಯಾರ್ ಇಸಾಯಿಲ್ ಸಾಬ್ ಕೊತ್ತವಾಲ್, ಸಜಾದ್ ಸಾಬ್ ಕವಲುರ, ಖಾದ್ರಿ ಸಾಹೇಬ್ ಅನೇಕರು ಪಾಲ್ಗೊಂಡಿದ್ದರು.   ಡಾ. ಹಸನ್ ಅಲಿ ನಿಂಗಾಪುರರವರು ಈ ಸಾಮೂಹಿಕ ಉಚಿತ ಖತ್ನಾ ಶಿಬಿರದಲ್ಲಿ ಸುಮಾರು ೩೦ ಮಕ್ಕಳಿಗೆ ಖತ್ನಾ ನೆರವೇರಿಸಿದರು. ಈಗಾಗಲೇ ಸದರಿಯವರು ಕೊಪ್ಪಳ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಾಗೂ ಹೈದ್ರಬಾದ್ ಕರ್ನಾಟಕದ ಬಹುಭಾಗ ಪ್ರದೇಶಗಳನ್ನು ಸಾಮೂಹಿಕ ಉಚಿತ ಖತ್ನಾ ನಡೆಸಿ ಯಶಸ್ವಿಯಾಗಿದ್ದಾರೆ ಮತ್ತು ಉಚಿತವಾಗಿ ಬಡಮಕ್ಕಳಿಗೆ ಸಮವಸ್ತ್ರ, ಔಷದಿ ಕೂಡ ತಮ್ಮ ತಂದೆಯವರ ಸ್ಮರಣೆಗಾಗಿ ನೀಡುತ್ತ ಬಂದಿರುವುದು ಶ್ಲಾಘನೀಯವಾಗಿದೆ.
Please follow and like us:
error

Leave a Reply

error: Content is protected !!