You are here
Home > Koppal News > ವಿವೇಕಾನಂದ ಶಾಲೆಯಲ್ಲಿ ‘ಯೋಗ ತರಬೇತಿ’

ವಿವೇಕಾನಂದ ಶಾಲೆಯಲ್ಲಿ ‘ಯೋಗ ತರಬೇತಿ’

ದಿನಾಂಕ, ೨೮: ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮತ್ತು ಯೋಗಾಭ್ಯಾಸದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ೧೦ ದಿನಗಳ ವಿಶೇಷ ಯೋಗ ತರಬೇತಿಯನ್ನು ಆಯೋಜಿಸಲಾಗಿತ್ತು. ಆಸಕ್ತ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಂಡು ಏಕಾಗ್ರತೆ, ಧ್ಯಾನ, ತದೇಕಚಿತ್ತ ಮನಸ್ಸು, ಗಮನ ಕೇಂದ್ರೀಕರಣದತ್ತ ವಾಲಿ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುವ ಆಶಾಭಾವನೆ ವ್ಯಕ್ತಪಡಿಸಿದರು.

ಸಮಾರೋಪದ ೧೦ ನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನೇರ್ಪಡಿಸಲಾಗಿತ್ತು. ಯೋಗದ ಪ್ರಾರಂಭದ ಅವಧಿಯಿಂದ ಹೋಲಿಕೆ ಮಾಡಲಾಗಿ ಕೊನೆಯ ದಿನದ ಹೊತ್ತಿಗೆ ಮಕ್ಕಳ ಮಾನಸಿಕ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ ಕಂಡುಕೊಂಡಿದ್ದು, ಮಕ್ಕಳು ಈ ತರಬೇತಿಯಲ್ಲಿ ಪಡೆದ ೧೫ ಆಸನಗಳ ಪೈಕಿ ಕನಿಷ್ಠ ೧೦ ಆಸನಗಳನ್ನಾದರೂ ಮನೆಯಲ್ಲಿ ದಿನಂಪ್ರತಿ ಮಾಡಿದರೆ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಲು ಸಾಧ್ಯವಾಗುತ್ತದೆ ಎಂದು ೧೦ ದಿನಗಳ ಕಾಲ ಯೋಗದ ತರಬೇತಿಯನ್ನು ಸ್ವತಃ ತಾವೇ ನೀಡಿದ ಶಾಲಾ ಪ್ರಾಚಾರ್ಯ ಎ. ಧನಂಜಯನ್ ಹೇಳಿದರು. ಉಪಪ್ರಾಚಾರ್ಯೆ ಪ್ರಮೋದಿನಿ ಸಹ ಈ ಯೋಗ ತರಬೇತಿಯಲ್ಲಿ ಪಾಲುಗೊಂಡಿದ್ದರು.
ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮತ್ತು ಯೋಗಾಭ್ಯಾಸದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ನೀಡಲಾದ ೧೦ ದಿನಗಳ ವಿಶೇಷ ಯೋಗ ತರಬೇತಿಯಲ್ಲಿ ಮಗ್ನರಾದ ಶಾಲೆಯ ಮಕ್ಕಳು ಮತ್ತು ತರಬೇತಿ ನೀಡುತ್ತಿರುವ ಶಾಲಾ ಪ್ರಾಚಾರ್ಯ ಎ. ಧನಂಜಯನ್.

Leave a Reply

Top