ಪತ್ರಕರ್ತ ದಯಾನಂದ ಮಾಲಗಿತ್ತಿ ನಿಧನ

ಕೊಪ್ಪಳದ ಹಿರಿಯ ಪತ್ರಕರ್ತ ದಯಾನಂದ ಮಾಲಗಿತ್ತಿ ನಿಧನರಾಗಿದ್ದಾರೆ. ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿದ್ದ ಮಾಲಗಿತ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 

http://www.facebook.com/photo.php?v=245178705562856

ಹಿರಿಯ ಪತ್ರಕರ್ತ ದಯಾನಂದ ಮಾಲಗಿತ್ತಿ (೫೦) ಅವರು ಇಂದು ಬೆಳಗಿನ ಜಾವ ಡೆಂಗ್ಯೂ ಜ್ವರದಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ದಯಾನಂದ ಮಾಲಗಿತ್ತಿಯವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ತಾಯಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರು ಕಳೆದ ಎರಡು ದಶಕಗಳಿಂದ ಪ್ರಜಾವಾಣಿ,ಉದಯವಾಣಿ, ಸಂಜೆವಾಣಿ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಸೇವೆಸಲ್ಲಿಸಿದ್ದರು. ರಾಜ್ಯ ಕಾರ್ಯನಿತರ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯು ಅವರು ಸೇವೆ ಸಲ್ಲಿಸಿದ್ದರು.
ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ  ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಿಧನ ಹೊಂದಿದರು.
ಹಿರಿಂii ಪತ್ರಕರ್ತ ದಯಾನಂದ ಮಾಲಗಿತ್ತಿಯವರ  ನಿಧನಗೊಂಡ ಸುದ್ದಿ ತಿಳಿಯುತ್ತಿದಂತೆ ತೆ ಅವರ ನಿವಾಸಕ್ಕೆ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಜೆಡಿಎಸ್ ಮುಖಂಡರಾದ ಪ್ರದೀಪಗೌಡ ಮಾಲಿ ಪಾಟಿಲ್, ಕೆ.ಎಂ. ಸೈಯದ, ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಶಂಭಲಿಂಗನಗೌಡ ಪಾಟೀಲ್ ಜಿ.ಪಂ ಅಧ್ಯಕ್ಷೆ ಜ್ಯೋತಿ ಬಿಲ್ಗಗಾರ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು 
ದಯಾನಂದ ಮಾಲಗಿತ್ತಿ ನಿಧನಕ್ಕೆ ಕೊಪ್ಪಳ ಮೀಡಿಯಾ ಕ್ಲಬ್,ಕೊಪ್ಪಳ ಜಿಲ್ಲಾ ಕಾರ್ಯನಿತರ ಸಂಘ ಸಂತಾಪ ಸೂಚಿಸಿದೆ.
 ಮೃತರ ಆತ್ಮಕ್ಕೆ ಶಾಂತಿ ಕೋರಿ, ದುಖಃವನ್ನು ಸಹಿಸಿಕೊಳ್ಳ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದರು.
Please follow and like us:
error