ಕೊಪ್ಪಳ ಜಿಲ್ಲಾ ೬ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಈಶ್ವರ ಹತ್ತಿ ಆಯ್ಕೆ

 ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಕೊಪ್ಪಳ ತಾಲೂಕಿನ ಮುನಿರಾಬಾದ ನಂಬರ ೧ ತುಂಗಭದ್ರಾ ಜಲಾಶಯದ ಪ್ರಥಮ ದರ್ಜೆಯ ಉಗ್ರಾಣ ಪಾಲಕರಾದ ಈಶ್ವರ ಹತ್ತಿ ಇವರನ್ನು ಅಗಷ್ಟ್ ನಲ್ಲಿ ನಡೆಯಲಿರುವ  ಕೊಪ್ಪಳ ಜಿಲ್ಲಾ ೬ನೇ  ಚುಟುಕು ಸಾಹಿತ್ಯ  ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಈಶ್ವರ ಹತ್ತಿಯವರು ಯಲಬುರ್ಗಾ ತಾ

ಲೂಕಿನ ಗುನ್ನಾಳ ಗ್ರಾಮದವರು. ಇವರು ಅಪೂರ್ಣ, ಮಹಾದಾಸೋಹಿ ಶರಣ ಬಸವ ಕಾವ್ಯ, ಕವೀಶ್ವರನ ತ್ರಿದಳಗಳು, ದೇವಿ ಮತ್ತು ಇತರ ಕಥೆಗಳು, ಗುನ್ನಾಳೇಶನ ವಚನಗಳು ಅಳ್ಳೊಳ್ಳಿ ಬಂತು ಕಳ್ಳೊಳ್ಳಿ, ಕೋಪಣಾಚಲದ ಗವಿಸಿದ್ದೇಶ್ವರರು ಕೃತಿಗಳನ್ನು ಹೊರತಂದಿದ್ದಾರೆ.

ಒಟ್ಟಾರೆ ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಇವರನ್ನು ಈ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು  ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.  
Please follow and like us:
error

Related posts

Leave a Comment