8-10 ತಿಂಗಳಲ್ಲಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ -ಕೋಡಿಮಠಶ್ರೀಗಳು

ಸಿದ್ದರಾಮಯ್ಯನವರ ಸರಕಾರ ಅಸ್ಥಿರವಾಗಿದ್ದು  ಮುಂದಿನ 8-10 ತಿಂಗಳಲ್ಲಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅವರು ಹಿರಿಯ ಮುಖಂಡ ಅಂದಣ್ಣ ಅಗಡಿಯವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಜಾಗತಿಕವಾದ ಜಲ ಆಪತ್ತಿದೆ. ಸಾಗರದಲ್ಲಿ ಗಜನಿಂಬೆ ತೇಲಿತು.ಹೊಸ ಭೂಮಿ ಸೃಷ್ಟಿಯಾಗುತ್ತೆ.ಭಯೋತ್ಪಾದನೆಯ ಹೆಚ್ಚಳವಾಗುತ್ತೆ ಎಂದರು.
             ಮೌಢ್ಯಪ್ರತಿಬಂಧಕ ಹಾಗೂ ಅಡ್ಡಪಲ್ಲಕ್ಕಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಜನರಿಗೆ ಉತ್ತಮ ಶಿಕ್ಷಣ ನೀಡುವುದು ಮತ್ತು ನೈಜ ತಿಳುವಳಿಕೆಯನ್ನು ನೀಡುವುದರಿಂದ  ಇವೆಲ್ಲವನ್ನೂ ನಿವಾರಿಸಬಹುದು. ಪಲ್ಲಕ್ಕಿ ಹೊರುವವರು ಇರುವವರೆಗೆ ಸವಾರಿ ಮಾಡುವವರು ಇದ್ದೇ ಇರುತ್ತಾರೆ ಎಂದರು.
         ಕೇಂದ್ರ ಸರಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೇಳಿದ್ದು – ಮುತ್ತಿನ ಗಿಣಿ ಮುದುಕಾಗಿ ಮುತ್ತಾಯಿತು- ಇದರ  ಅರ್ಥವನ್ನು ಬಿಡಿಸಿ ಹೇಳಲು  ಶ್ರೀಗಳು  ನಿರಾಕರಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಸದಸ್ಯರಾದ ಅನಿಕೇತ ಅಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Please follow and like us:
error