You are here
Home > Koppal News > ಸಹಕಾರಿ ಸಂಘ ಬೆಳೆಯಲು ಸದಸ್ಯರ ಸಹಕಾರ ಅಗತ್ಯ : ಕೆ.ಎಂ.ಸಯ್ಯದ್

ಸಹಕಾರಿ ಸಂಘ ಬೆಳೆಯಲು ಸದಸ್ಯರ ಸಹಕಾರ ಅಗತ್ಯ : ಕೆ.ಎಂ.ಸಯ್ಯದ್

 : ಸಹಕಾರಿ ಕ್ಷೇತ್ರ ಬೆಳೆದರೆ ಇತರ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ ಸಹಕಾರಿ ಸಂಘಗಳು ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ಆ ಪತ್ತಿನ ಸಹಕಾರಿ ನಿಯಮಿತ ಸಂಘದ ಸರ್ವಸದಸ್ಯರ ಸಹಕಾರ ಅಗತ್ಯ ಎಂದು ಡಾ|| ಅಬ್ದುಲ್ ಕಲಾಂ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತದ ಸಂಸ್ಥಾಪಕ ಹಾಗೂ ಮುಖ್ಯಪ್ರವರ್ತಕರಾದ ಕೆ.ಎಂ.ಸಯ್ಯದ್  ಹೇಳಿದರು.
ಅವರು ಗುರುವಾರ ನಿಯಮಿತದ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಿದ ಸರ್ವಸದಸ್ಯರ ಸಾಮಾನ್ಯಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಕ್ಷೇತ್ರದಲ್ಲಿ ಅಡಗಿದೆ. ಯಾವುದೇ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾರೆ ಪ್ರತಿಯೋಬ್ಬರ ಸಹಕಾರ ಅವಶ್ಯಕ ಎಂದರು.
ಮುಂದುವರೆದು ಮಾತನಾಡಿದ ಅವರು ಕೊಪ್ಪಳದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ನಮ್ಮ ಸಂಘದ ಸದಸ್ಯರೆಲ್ಲರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಸಂಘದ ನೀತಿನಿಯಮಗಳನ್ನು ಪಾಲಿಸಿ ಸಂಘ ಮುನ್ನಡೆಸಬೇಕೆಂದು ಇದೆ ಸಂದರ್ಭದಲ್ಲಿ ಡಾ|| ಅಬ್ದುಲ್ ಕಲಾಂ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತದ ಸಂಸ್ಥಾಪಕ ಹಾಗೂ ಮುಖ್ಯಪ್ರವರ್ತಕರಾದ ಕೆ.ಎಂ.ಸಯ್ಯದ್  ಸಲಹೆ ಮಾಡಿದು.
ಈ ಸಂಘಕ್ಕೆ ಮುಖ್ಯ ಪ್ರವರ್ತಕರನ್ನು ಮುಂದುವರೆಸಲು ಸಭೆಯು ತೀರ್ಮಾನಿಸಿದ್ದು ಹಾಗೂ ಚುನಾವಣೆ ಅಧಿಕಾರಿಗಳ ನೇಮಕ ನಿಗದಿತ ಸಮಯದಲ್ಲಿ ನಿದೇಶಕರ ಮಂಡಳಿಯ ಚುನಾವಣೆ ಅಥವಾ ಈಗಿರುವ ನಿರ್ದೇಶಕರನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳುವ ಅಧಿಕಾರ ಸೇರಿದಂತೆ ತೊಗಲುವ ಖರ್ಚುವೆಚ್ಚ ಇತ್ಯಾದಿ ಸಂಘದ ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಮತ್ತು ಸಿಬ್ಬಂಧಿ ನೇಮಕ ಮಾಡಿಕೊಳ್ಳುವ ಅಧಿಕಾರ ಮುಖ್ಯಪ್ರವರ್ತಕರಿಗೆ ನೀಡುವಂತೆ ಸಭೆಯು ಸರ್ವಾನುಮತದಿಂದ ಅಂಗಿಕರಿಸಿ ಒಪ್ಪಿಗೆ ನೀಡಿತು.
ಈ ಸಭೆಯಲ್ಲಿ ಸಹಕಾರಿ ಇಲಾಖೆ ಉಪನಿಬಂಧಕರ ಕಾರ್ಯಾಲಯದ ವತಿಯಿಂದ ಬಸಪ್ಪ ಗಾಳಿ, ನ್ಯಾಯವಾದಿ ಬೆ.ಕೆ. ಹಿರೇಮಠರವರು ವಿಶೇಷ ಆಮಂತ್ರಿತರಾಗಿ ಸಭೆಗೆ ಉಪಸ್ಥಿತರಿದ್ದು ಸಂಘ ಮತ್ತು ಸಹಕಾರಿ ಇಲಾಖೆಯ ನಿಯಮ ಕಾಯಿದೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ನಿದೇಶಕರು ಹಾಗೂ ಸರ್ವ ಸದಸ್ಯರುಗಳು ಪಾಲ್ಗೊಂಡಿದ್ದರು. ಸಭೆಯ ಕಾರ್ಯಕಲಾಪವನ್ನು ಎಫ್.ಎ.ನೂರಬಾಷಾ ರವರು ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. 

Leave a Reply

Top