ಅಖಿಲ ಭಾರತ ವಿದ್ಯಾರ್ಥಿ ಸಂಘ- ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹ

ರಾಜ್ಯ ಅಥವಾ ರಾಜ್ಯದ ಯಾವುದೇ ಪ್ರದೇಶದ ಅಭಿವೃದ್ಧಿ ಎಂಬುವುದು ಆಯಾ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿ ಯನ್ನು ಒಳಗೊಂಡಿರುತ್ತದೆ ಎಂಬುದನ್ನು ತಾವೂ ಬಲ್ಲಿರಿ. ಗಂಗಾವತಿ ತಾಲ್ಲೂಕಿನ ಶೈಕ್ಷಣಿಕ ದು:ಸ್ಥಿತಿಯನ್ನು ನೋಡಿದಾಗ ಈ ತಾಲ್ಲೂಕು ರಾಜ್ಯದ ಅಭಿವೃದ್ಧಿಯ ನಕಾಶೆಯಲ್ಲಿ ಇದೆ ಎಂಬ ಬಗ್ಗೆ ಅನುಮಾನಗಳು ಏಳುತ್ತವೆ.
ತಾಲ್ಲೂಕಿನ ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಷ್ಟು ಶಾಲಾ ಕಾಲೇಜುಗಳಲ್ಲಿ ಕಟ್ಟಡಗಳಿಲ್ಲದಿರುವುದು ಇರುವ ಕಟ್ಟಡ ಗಳಲ್ಲಿ ಕೊಠಡಿಗಳ ಕೊರತೆಯಿರುವುದು, ಶಿಕ್ಷಕ ಮತ್ತು ಉಪನ್ಯಾಸಕರ ಕೊರತೆಗಳಿರುವುದು, ಗ್ರಂಥಾಲಯ, ಪ್ರಯೋಗಾ ಲಯ, ಅಷ್ಟೇ ಏಕೆ ಶೌಚಾಲಯಗಳೂ ಇಲ್ಲದಿರುವುದು ಅಥವಾ ಸುಸ್ಥಿತಿಯಲ್ಲಿಲ್ಲದಿರುವುದು ಈ ತಾಲ್ಲೂಕಿನ ಶೈಕ್ಷಣಿಕ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳಾದ ತಾವು ಈ ಕೂಡಲೇ ಈ ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಮತ್ತು ಸಮಸ್ಯೆಗಳ ನಿವಾರಣೆಯ ಬಗ್ಗೆ ಸೂಕ್ತ ಹಾಗೂ ಶೀಘ್ರ ಕ್ರಮ ಕೈಗೊಳ್ಳುವಿರೆಂದು ಆಶಿಸುತ್ತೇವೆ.  
:ಹಕ್ಕೊತ್ತಾಯಗಳು:
೧. ತಾಲ್ಲೂಕಿನಲ್ಲಿ ವಿಪರೀತ ಡೊನೇಷನ್ ಹಾವಳಿಯಿದ್ದು, ಸರ್ಕಾರ ನಿಗದಿಪಡಿಸಿದ ಅಭಿವೃದ್ಧಿ ಶುಲ್ಕವನ್ನು ಹೊರತುಪಡಿಸಿದ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಶಾಲಾ ಕಾಲೇಜುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. 
೨. ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆ ಭರ್ತಿಯಾಗಬೇಕು ಮತ್ತು ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಷ್ಟು ಹೊಸ ಹುದ್ದೆಗಳು ಸೃಷ್ಟಿಯಾಗಬೇಕು.
೩. ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಷ್ಟು ಕೊಠಡಿಗಳ ನಿರ್ಮಾಣ ಆಗಬೇಕು ಮತ್ತು ದುಸ್ಥಿತಿಯಲ್ಲಿರುವ ಕಟ್ಟಡಗಳ ರಿಪೇರಿಯಾಗಬೇಕು.
೪. ಗ್ರಂಥಾಲಯ ಹಾಗೂ ಪ್ರಯೋಗಾಲಯಗಳ ಸೌಲಭ್ಯ ಸುಲಭವಾಗಿ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. 
೫. ಎಲ್ಲ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ಸೌಕರ್ಯ ಒದಗಿಸಬೇಕು.
೬. ಎಲ್ಲ ಶಾಲಾ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗಬೇಕು.
೭. ಕ್ರೀಡಾ ಸಾಮಗ್ರಿ ಹಾಗೂ ಕ್ರೀಡಾಂಗಣದ ಸೌಲಭ್ಯ ದೊರಕಬೇಕು.
೮. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಸೌಕರ್ಯ ಒದಗಿಸಬೇಕು. 
೯. ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ದೊರಕಬೇಕು. ಈ ನಿಟ್ಟಿನಲ್ಲಿ ವಿವಿಧ ಶಿಷ್ಯವೇತನಗಳ ಬಗ್ಗೆ ಮಾಹಿತಿಯು ಪ್ರತಿ ಶಾಲಾ-ಕಾಲೇಜುಗಳಲ್ಲಿ ದೊರಕುವಂತಾಗಬೇಕು. ಹಾಗೂ ಶಿಷ್ಯ ವೇತನದಿಂದ ಅರ್ಹ ವಿದ್ಯಾರ್ಥಿಗಳು ವಂಚಿತರಾದಲ್ಲಿ ಸಂಬಂಧಪಟ್ಟ ಶಾಲಾ-ಕಾಲೇಜು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸಬೇಕು.
೧೦. ವಿಶೇಷ ಅಗತ್ಯತೆಯಿರುವ (ವಿಕಲಚೇತನ)ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಕರನ್ನು ನೇಮಿಸಬೇಕು ಮತ್ತು ಅಗತ್ಯ ಶೈಕ್ಷಣಿಕ ಹಾಗೂ ಪೂರಕ ಸೌಕರ್ಯಗಳನ್ನು ಕಲ್ಪಿಸಬೇಕು.  
  ಈ ಸಮಸ್ಯಗಳ ಕುರಿತು ದಿ ೧೧ರ ಬೆಳಿಗ್ಗೆ ೧೧.೦೦ ಗಂಟೆಗೆ ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಐಸಾ ಸಂಘಟನೆ ಸಾಂಕೇತಿಕ ಧರತಣಿ ಸತ್ಯಾಗ್ರಹವನ್ನು ನಡೆಸಿದರು. ಮತ್ತು ಧರಣಿಯಲ್ಲಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಗಂಗಾವತಿಗೆ ಬರುವ ವಿದ್ಯಾರ್ಥಿಗಳ ಬಸ್ ಸೌಲಭ್ಯಕ್ಕಾಗಿ ಆರ್‌ಟಿಸಿ ಗಂಗಾವತಿ ಘಟಕ ವ್ಯವಸ್ಥಾಪಕರ ಮುಖಾಂತರ ಸಾರಿಗೆ ಸಚಿವರಿಗೆ ಮನವಿಯನ್ನು ಸಲ್ಲಿಸಿದರು. 
ಹೋರಾಟದಲ್ಲಿ ಪಾಲ್ಗೊಂಡವರು: ಭಾರದ್ವಾಜ್, ವಿರುಪಾಕ್ಷಪ್ಪ, ಬಸನಗೌಡ, ಟಿ. ರಾಘವೇಂದ್ರ, ಐಸಾ ಅಧ್ಯಕ್ಷ ಹೆಚ್. ಪರಮೇಶ್ವರ್, ಮಲ್ಲಯ್ಯ, ಚಂದ್ರಶೇಖರ, ವೀರೇಶ ಹಗೇದಾಳ, ಸೈದಪ್ಪ, ರುದ್ರೇಶ, ಬಸವರಾಜ್, ವೀರೇಶ ಸೊನ್ನದ್, ಶಿವಮೂರ್ತಿ, ವೀರೇಶ ಚಿಕ್ಕಡಂಕನಕಲ್, ಮಂಜುಳಾ, ಸಾವಿತ್ರಿ, ಲಕ್ಷ್ಮಿದೇವಿ, ಸುಲ್ತಾನ್‌ಬಿ, ಮತ್ತಿತರು ಭಾಗವಹಿಸಿದ್ದರು. 
Please follow and like us:
error