ಕವಲೂರಲ್ಲಿ ಕ್ರಿಕೆಟ್ ಟೂರ್ನಾಮೇಂಟ್‌ಗೆ ಸಯ್ಯದ್ ಚಾಲನೆ

ಕೊಪ್ಪಳ ೧೫ : ಗ್ರಾಮಿಣ ಭಾಗದಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರಿದ್ದಾರೆ ಇಂತಹ ಟೂರ್ನಿಗಳಿಂದ ಪ್ರತಿಭೆಗಳು ಬೆಳಕಿಗೆ ಬರಲು ಸಹಕಾರಿ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಮುಖಂಡ ಕೆ.ಎಂ.ಸಯ್ಯದ್ ಹೆಳಿದರು. ಅವರು ತಾಲೂಕಿನ ಕವಲೂರ ಗ್ರಾಮದಲ್ಲಿ ದಸರಾ ಪ್ರಯೂಕ್ತ ಶ್ರೀ ಶಾಹುಮಹರಾಜ ಸ್ಡೂಡೆಂಟ್ ಯುನಿಯನ್ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ ಸೋಮವಾರದಂದು ಕ್ರಿಕೆಟ್ ಟೂರ್ನಿ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಇಂತಹ ಟೂರ್ನಿಗಳಿಗೆ ಸಹಕಾರ ನೀಡಿ ಕ್ರೀಡಾಪಟಗಳು ಮುಖ್ಯವಾಹಿನಿಗೆ ಬರುವಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು. ತಾಲೂಕಿನ ೫೦ ತಂಡಗಳ ಟೂರ್ನಿಯನ್ನು ನಮ್ಮ ಸಂಸ್ಥೆಯ ವತಿಯಿಂದ ಆಯೋಜಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಗ್ರಾಮಿಣ ಕ್ರಿಕೆಟ್ ಕೂಡ ಮಾದ್ಯಮದಲ್ಲಿ ನೇರವಾಗಿ ನೋಡುವಂತಾಗಬೇಕು ಎಂದರು ನಂತರ ಕವಲೂರ ಗ್ರಾಮದ ಜೈಭೀಮ ತಂಡಕ್ಕೆ ಸಯ್ಯದ್ ಫೌಂಡೇಶನ್ ವತಿಯಿಂದ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಭುಗೌಡ ಪಾಟೀಲ್, ಗೌಸ್‌ಸಾಬ ನೀರಲಗಿ, ಮೈನುಸಾಬ ಕುಷ್ಟಗಿ, ಮಲ್ಲಪ್ಪ ಭೂತಣ್ಣನವರ, ಲಕ್ಷ್ಮಣ ಗೂಡಿ, ಸ್ವಾರಪ್ಪ ಕವಲೂರ, ದೇವಪ್ಪ ಸಿದ್ನೇಕೊಪ್ಪ, ಶ್ರೀಕಾಂತ, ಶಿವಪ್ಪ ಗುಡಿಹಿಂದ, ಹನುಮಂತ ಎಲಿಗಾರ, ನಾಗರಾಜ್ ಬೆಲ್ಲದ್, ಗವಿಸಿದ್ದಪ್ಪ ಹಂಡಿ ಹಾಗೂ ಸಯ್ಯದ್ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಕ್ರೀಡಾಪಟೂಗಳು ಮತ್ತು ಅಭಿಮಾನಿಗಳು ಇದ್ದರು. 
Please follow and like us:
error