You are here
Home > Koppal News > ಗಂಗಾವತಿ ಅಭಿವೃದ್ಧಿಯೇ ನನ್ನ ಗುರಿ – ಇಕ್ಬಾಲ್ ಅನ್ಸಾರಿ

ಗಂಗಾವತಿ ಅಭಿವೃದ್ಧಿಯೇ ನನ್ನ ಗುರಿ – ಇಕ್ಬಾಲ್ ಅನ್ಸಾರಿ

 ಗಂಗಾವತಿ ನಗರ ಮತ್ತು ಕ್ಷೇತ್ರದ ಮೂಲ ಅಭಿವೃದ್ದಿಯೇ ನನ್ನ ಗುರಿ ಎಂದು ಶಾಸಕ ಇಕ್ಬಾಲ್ ಅನ್ಸಾರಿಯವರು ಹೇಳಿದರು. ತಾಲೂಕಿನ ಔಷಧ ವ್ಯಾಪಾರಿಗಳು ನಗರದ ಔಷಧೀಯ ಭವನದಲ್ಲಿ ಹಮ್ಮಿ ಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಇಂಜಿನೀಯರಿಂಗ್ ಕಾಲೇಜ್, ಕೃಷಿ ಕಾಲೇಜ್, ಮಹಿಳಾ ಮತ್ತು ಮಕ್ಕಳ ಸಾರ್ವಜನಿಕ ಆಸ್ಪತ್ರೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ದುರಸ್ಥಿ, ನಗರ ಸಭೆ ಕಟ್ಟಡದ ಆಧುನೀಕರಣ ಮುಂತಾದ ಯೋಜನೆಗಳನ್ನು  ಮುಂದಿನ ದಿನಗಳಲ್ಲಿ ಕೈಗೆ ಎತ್ತಿಕೊಳ್ಳಲಾಗುವುದು ಎಂದರು.
ಸರಕಾರಿ ಐ.ಟಿ.ಐ ಕಾಲೇಜ್ ರಸ್ತೆ ಅಗಲಿಕರಣ ಆ ಭಾಗದ ಕೆರೆಯ ಅಭಿವೃದ್ದಿ, ಸಹಾಯಕ ಪ್ರಾದೇಶಿಕ ಕಛೇರಿ ಆರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಾವು ಸರ್ವ ಧರ್ಮ ಪ್ರಿಯರಾಗಿದ್ದು, ಎಲ್ಲಾ ಸಮಾಜದ, ಎಲ್ಲಾ ವರ್ಗಗಳಿಗೆ ಸೇರಿದ ಜನರ ಕಾರ್ಯಗಳಿಗೆ ಸ್ಪಂಧಿಸುವುದಾಗಿ ಹೇಳಿದರು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿರಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸ ಬಹುದಾಗಿದ್ದು, ಜನಸಾಮಾನ್ಯರ ಮೇಲೆ ದೌರ್ಜನ್ಯವೆಸಗುವ ಯಾವುದೇ ಶಕ್ತಿಗಳಿಗೂ ಅವಕಾಶ ಕೊಡುವುದಿಲ್ಲ ಎಂದವರು ಪರೋಕ್ಷವಾಗಿ ಬ್ಲಾಕ್ ಮೇಲ್ ವೃತ್ತಿಯಲ್ಲಿರುವವರಿಗೆ ಎಚ್ಚರಿಸಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಬೆಲೆ ನಿಯಂತ್ರಣ ಆದೇಶದಲ್ಲಿ ಬರುವ ೩೪೦ ಔಷಧಗಳ ಪಟ್ಟಿ ಮತ್ತು ೧೫೧ ಔಷಧಗಳ ಬೆಲೆ ಪಟ್ಟಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿ ಈ ಬಗೆ ಔಷಧ ವ್ಯಾಪಾರಿಗಳಿಗೆ ಮಾಹಿತಿ ನೀಡಿದರು ಮತ್ತು ನಿಷೇಧಿತ ಮೂರು ಔಷಧಗಳನ್ನು ಮಾರಾಟ ಮಾಡದಿರಲು ಸೂಚಿಸಿ, ರೋಗಿಗಳಿಗೆ ಔಷಧಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು.
ಸಮಾರಂಭದ ವೇದಿಕೆಯ ಮೇಲೆ ಎಸ್.ಬಿ.ಖಾದ್ರಿ, ನಗರಸಭಾ ಸದಸ್ಯ ಮನೋಹರ ಸ್ವಾಮಿ, ಮುದೇನೂರ ಹಿರೇಮಠ, ತಾಲೂಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕನಕರಾಜ ದರೋಜಿ, ಕಾರ್ಯದರ್ಶಿ ಹನುಮರೆಡ್ಡಿ ಪಾಟೀಲ, ನಿರ್ದೇಶಕ ಅಮರೇಶ ಕಾರಟಗಿ ಉಪಸ್ಥಿತರಿದ್ದರು. ತಾಲೂಕಿನ ಸುಮಾರು ೨೦೦ ಕ್ಕೂ ಹೆಚ್ಚಿನ ಸಂಖ್ಯೆಯ ಔಷಧ ವ್ಯಾಪಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. 
ಅಭಿಷೇಕ  ಸ್ವಾಮಿಗೆ  ಸನ್ಮಾನ

ಗಂಗಾವತಿ, ನಗರದ ನ್ಯಾಯಾವಾದಿ ದಂಪತಿಗಳ ಮಗನಾದ ಅಭಿಷೇಕ ಸ್ವಾಮಿಗೆ ಮೈಸೂರ ಸರಕಾರಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪ್ರವೇಶ ದೊರಕಿರುವ ಕಾರಣ ಶಾಸಕ ಇಕ್ಬಾಲ್ ಅನ್ಸಾರಿಯವರು ಸನ್ಮಾನಿಸಿದರು. ಈ ಸನ್ಮಾನವನ್ನು ಭಾರತೀಯ ಔಷಧೀಯ ಸಂಘದ ಗಂಗಾವತಿ ಶಾಖೆಯ ಅಧ್ಯಕ್ಷ ಹನುಮರೆಡ್ಡಿ ಮಾಲಿಪಾಟೀಲ್ ಔಷಧೀಯ ಭವನದಲ್ಲಿ ಆಯೋಜಿಸಿದ್ದರು.
ಅದರಂತೆ ನಗರಸಭಾ ಸದಸ್ಯ ಮನೋಹರ ಸ್ವಾಮಿಯವರೂ ಸಹ ಪ್ರತ್ಯೇಕವಾಗಿ ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಔಷಧ ವ್ಯಾಪಾರಿಗಳು ಉಪಸ್ಥಿತರಿದ್ದರು. 

Leave a Reply

Top