You are here
Home > Koppal News > ಸಂಸದರ ತೋಟದಲ್ಲಿ ಕೊಲೆ

ಸಂಸದರ ತೋಟದಲ್ಲಿ ಕೊಲೆ

ಕೊಪ್ಪಳ : ಸಂಸದ ಕರಡಿ ಸಂಗಣ್ಣನವರ ಕೂಕನಪಳ್ಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮವ್ವ(30) ಎನ್ನುವ ಮಹಿಳೆಯನ್ನು   ಸಲಿಖೆಯಿಂದ ಹೊಡೆದು ಕೊಲೆ ಮಾಡಲಾಗಿದೆ.  ಕೊಲೆಗೀಡಾದ ಲಕ್ಷ್ಮವ್ವಳ ಗಂಡ ಶರಣಪ್ಪನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಳೆದ  ಕೆಲವು ದಿನಗಳಿಂದ ಕೂಕನಪಳ್ಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈ ಗಂಡ ಹೆಂಡತಿಯರ ನಡುವೆ ಜಗಳ ವಿಕೋಪಕ್ಕೆ ಹೋಗಿ ಬೆಳಗಿನ ಜಾವ ಸಲಿಖೆಯಿಂದ ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.  ಗಂಡ ಶರಣಪ್ಪ  ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದವನು ಎನ್ನಲಾಗಿದೆ.   ಕೊಲೆ ಮಾಡಿದ ನಂತರ 8 ವರ್ಷದ ತನ್ನ ಮಗನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಮುನಿರಾಬಾದ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Top