fbpx

ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಯುವ ಸಾಹಿತ್ಯ ಸಮ್ಮೇಳನ.

ಕೊಪ್ಪಳ-21-  ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಕೇಂದ್ರ ಹೈದ್ರಾಬಾದ್ ಕರ್ನಾಟಕ ನಾಗರೀಕ ವೇದಿಕೆ ಕೊಪ್ಪಳ ಮತ್ತು ಬೆಂಗಳೂರು ಇವರ ಸಹಯೋಗದಲ್ಲಿ ಜರುಗಲಿರುವ ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಉತ್ಸವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳು ಬೆಳಿಗ್ಗೆ ೯.೦೦ ಘಂಟೆಯಿಂದ  ಪ್ರಾರಂಭವಾಗಲಿದ್ದು ಪ್ರವಾಸಿ ಮಂದಿರದಿಂದ ಸಾಹಿತ್ಯ ಭವನದವರೆಗೆ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಶಿವರಾಜ್ ತಂಗಡಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಉತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೆರಿಸಲಿದ್ದಾರೆ, ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಲಿದ್ದಾರೆ, ಸಾಂಸ್ಕೃರಿಕ ಕಲಾ ಉತ್ಸವ ಕಾರ್ಯಕ್ರಮವನ್ನು ಸಂಗಣ್ಣ ಕರಡಿ ಸಂಸದರು ಉದ್ಘಾಟನೆ ಮಾಡಲಿದ್ದಾರೆ, ಹಾಗೂ ಹೈದ್ರಾಬಾದ್ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ರಾಘವೇಂದ್ರ ಹಿಟ್ನಾಳ ಹಾಗೂ ಲೋಕಸಭಾ ಕಾಂಗ್ರೆಸ್ ಮುಖಂಡರಾದ ಬಸವನಗೌಡ ಬಾದರ್ಲಿ  ನೇರವೆರಿಸಲಿದ್ದಾರೆ. ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಉತ್ಸವ ಯುವ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಕಲಾವಿದರಾದ ವಿ.ಟಿ ಕಾಳೆ ಹಾಗೂ ಕೆ.ಎಲ್ ಕುಂದರಗಿ ಹಿರಿಯ ನ್ಯಾಯವಾದಿಗಳು ಮಾದಿನೂರು ಮಾಣಿಕ್ಯ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದು ಪ್ರಶಸ್ತಿ ಪ್ರಧಾನವನ್ನು ಬಿ.ಎಸ್ ಪಾಟೀಲ್ ಸರಕಾರಿ ಅಭಿಯೋಜಕರು ನೇರವೇರಿಸಿ ಕೊಡಲಿದ್ದಾರೆ. ಜೆ.ಎಸ್ ಗೋನಾಳ ಸಮ್ಮೇಳನಾಧ್ಯಕ್ಷರು ಇವರಿಂದ ಕಾರ್ಯಕ್ರಮ ಕುರಿತಾದ ಪ್ರಾಸ್ತವಿಕ ನುಡಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈದ್ರಾಬಾದ್ ಕರ್ನಾಟಕ ವೇದಿಕೆ ಅಧ್ಯಕ್ಷರಾದ ಮಾರುತಿರಾವ್ ಸುರ್ವೆ ವಹಿಸಲಿದ್ದಾರೆ.  ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಜಿಲ್ಲಾ ಪಂಚಾಯಿತ್ ಅಧ್ಯಕ್ಷರಾದ ಶ್ರೀ ಅಮರೇಶ್ ಕುಳಗಿ, ಮುಖ್ಯ ಅತಿಥಿಗಳಾಗಿ ಬಸಮ್ಮ ಹಳ್ಳಿಗುಡಿ  ಅಧ್ಯಕ್ಷರು ನಗರಸಭೆ, ಬಾಳಪ್ಪ ಬಾರಕೇರ ಉಪಾಧ್ಯಕ್ಷರು ನಗರಸಭೆ, ರಾಜು ಬನ್ನಿಗೋಳ ಹಾಗೂ ಅತಿಥಿಗಳಾಗಿ ಅಗಮಿಸಲಿದ್ದಾರೆ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರು, ಹೆಚ್, ಎಸ್ ಪಾಟೀಲ್, ಮಹಾಂತೆಶ್ ಮಲ್ಲನಗೌಡ ಸಿ,ಹೆಚ್ ನಾರಿನಾಳ ಹಿರಿಯ ಪತ್ರಕರ್ತರಾದ ವಿಠ್ಠಪ್ಪ ಗೋರಂಟ್ಲಿ  ಹೈದ್ರಾಬಾದ್ ಕರ್ನಾಟಕಕ್ಕೆ ಸಂಬಂಧಪಟ್ಟ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿದ್ದು  ೩೭೧ನೇ ಕಾಲಂ ಪ್ರಕಾರ ಹೈದ್ರಾಬಾದ್ ಕರ್ನಾಟಕ ಸಾಹಿತಿಗಳಿಗೆ ಕಾಲಂನಿಂದ ಆಗುವ ಲಾಭಗಳು ಈ ಕುರಿತಾಗಿ ಮಾತನಾಡಲಿದ್ದಾರೆ ಶಿವಕವಿ ಜೋಗೂರು, ಕೊಪ್ಪಳ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಮಾತನಾಡಲಿದ್ದಾರೆ ಮನೋಹರ ಬೋಂದಾಡೆ, ಹಾಗೂ ಹೈದ್ರಾಬಾದ್ ಚಲನಚಿತ್ರರಂಗ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ ಪತ್ರಕರ್ತರಾದ ಬಸವರಾಜ್ ಕರುಗಲ್
ತದ ನಂತರದಲ್ಲಿ ಹೈದ್ರಾಬಾದ್ ಕರ್ನಾಟಕ ಕವಿಗೋಷ್ಠಿ ನಡೆಯಲಿದ್ದು ಕಾರ್ಯಕ್ರದ ಸಾನಿಧ್ಯವನ್ನು ಶ್ರೀ ಮಹಾದೇವ ಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಜೆ.ಎಂ ರಾಜಶೇಕರ್ ಮಾಡಲಿದ್ದು ಅದ್ಯಕ್ಷತೆಯನ್ನು ಮಾಧವಿ ಪಿ. ವೈದ್ಯ ಅವರು ವಹಿಸಲಿದ್ದಾರೆ, ಅತಿಥಿಗಳಾಗಿ ಮಾಜಿ ಕಸಾಪ ಅಧ್ಯಕ್ಷರಾದ ನಿಂಗೋಜಿ, ರಾಮೇಶ್ವರ, ಡಾಣೆ, ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಸುಮಾರು ೫೦ ಕ್ಕೂ ಅಧಿಕ ಯುವ ಕವಿಗಳು ತಮ್ಮ ಸ್ವ ರಚಿತವಾದ ಕವಿತವಾಚನ ಮಾಡಲಿದ್ದಾರೆ.
ಸಮ್ಮೇಳನಾಧ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಂಜುನಾಥ್ ಗೊಂಡಬಾಳ, ಕವಿತಾ ಓಲಿ, ಮಂಜುನಾಥ್ ಬಳ್ಳಾರಿ ಭಾಗವಹಿಸಲಿದ್ದಾರೆ. ಕೊನೆಯಲ್ಲಿ ಸಮಾರೋಪ ಸಮಾರಂಭದ ಕಾರ್ಯಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಹಾಚಾರ್ ಮಾಡಲಿದ್ದು, ಪಶಸ್ತಿ ಪ್ರಧಾನವನ್ನು ಚಂದ್ರಶೇಕರ್ ಇವರಿಂದ ನೇರವೇರಲಿದೆ ನಂತರಲ್ಲಿ ಸಮ್ಮೇಳನಾಧ್ಯಕ್ಷರಾದ ಜೆ.ಎಸ್ ಗೋನಾಳ ಇವರಿಂದ ಅಧ್ಯಕ್ಷರ ಭಾಷಣ ಮಾಡಲಿದ್ದಾರೆ, ಮುಖ್ಯ ಅತಿಥಿಗಳಾದ ಪತ್ರಕರ್ತರಾದ ಸಾಧಿಕ್ ಅಲಿ, ಹೆಚ್ ಎಸ್ ಹರೀಶ್, ಎನ್,ಎಮ್ ದೊಡ್ಡಮನಿ, ಸಂತೋಶ್ ದೇಶಪಾಂಡೆ ಶಿಕ್ಷಕರಾದ ಸಿದ್ದಲಿಂಗಪ್ಪ ಕೊಟ್ನೆಕಲ್ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕಾರ
ಸಮಾಜಸೇವೆ, ಕನ್ನಡಪರ ಸೇವೆ, ಸಾಹಿತ್ಯ, ಯುವ ಹೋರಾಟಗಾರರು, ಪ್ರವಚನೆ, ಸಾಹಿತ್ಯ ಸಂಗೀತ, ತಬಲವಾದನ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ನೃಪತುಂಗ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ಸಾಮಾಜೀಕ ಕಾಳಜಿಗಾಗಿ ನೀಡಲಾಗಿದೆ,
ಹಾಗೂ  ಸಮಾಜಸೇವಾ ರತ್ನ ಪ್ರಶಸ್ತಿಯನ್ನು ಬಸವರಾಜ್ ಕಣ್ಣಿ, ನಾಗರಾಜ್ ಕುಲಕರ್ಣಿ, ನಿರ್ಮಲ ಬೆಳ್ಳೋಳ್ಳಿ, ಕೋಮಲಾ ಕುದುರುಮೋತಿ, ಹನುಮಂತಪ್ಪ ಬಿಡನಾಳ ಇನ್ನೂ ಅನೇಕ ಸಮಾಜಿಕ ಸೇವೆ ಸಲ್ಲಿಸಿದವರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 
ಶಿಕ್ಷಣ ಸೇವಾ ಪ್ರಶಸ್ತಿ ಪುರಸ್ಕೃತರು ಈರಯ್ಯ ಕೊಳ್ಳಿಮಠ, ತಿಪ್ಪಣ್ಣ, ಶಶಿಕಲಾ ಎನ್, ರಮೇಶ್ ಗುಪ್ಪಿಗೂಡ ಪಡೆಯಲಿದ್ದಾರೆ. ಹಾಗೂ ವಿಶೇಷ ಸನ್ಮಾನಿತರು ಹೆಚ್.ಎಸ್ ಪಾಟೀಲ್. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಶೇಕರಗೌಡ ಮಾಲೀಪಾಟೀಲ್ ಸಹಕಾರ ಮಾಹಮಂಡಲ, ಬಸವನಗೌಡ ಬಾದರ್ಲಿ ಲೋಕಸಭಾ ಸದಸ್ಯರು.
ಹೈದ್ರಾಬಾದ್ ಕರ್ನಾಟಕ ಸಾಂಸ್ಕೃರಿಕ ಕಲಾ ಉತ್ಸವ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Please follow and like us:
error

Leave a Reply

error: Content is protected !!