ಬೃಹತ್ ಲೋಕ್ ಅದಾಲತ್ ಮೂಲಕ ೩ ಸಾವಿರ ಕೇಸ್ ಗಳ ಇತ್ಯಾರ್ಥದ ಗುರಿ- ಶ್ರೀಕಾಂತ ಬಬಲಾದಿ

ಕೊಪ್ಪಳ, ೩೧- ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಬಾಕಿ ಇರುವ ಸುಮಾರು ೧೦ಸಾವಿರ ಕೇಸ್‌ಗಳಿದ್ದು ಅದರಲ್ಲಿ ೩ ಸಾವಿರ ಕೇಸಗಳನ್ನು ಬೃಹತ್ ಲೋಕ್ ಅದಾಲತ್ ಮೂಲಕ ಇತ್ಯಾರ್ಥಗೊಳಿಸುವ ಗುರಿ ಹೊಂದಿರುವುದಾಗಿ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಕಾಂತ ಬಬಲಾದಿ ಹೇಳಿದರು.
ಅವರು ಜಿಲ್ಲಾ ನ್ಯಾಯಾಲಯ ದಲ್ಲಿ ಗುರುವಾರ ಸಂಜೆ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತ ನಾಡುತ್ತಿದ್ದರು ನ್ಯಾಯವಾಧಿಗಳ ಸಹಕಾರದಿಂದ ಕಕ್ಷೀದಾರರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಅದಾಲತ್ ಹಮ್ಮಿಕೊಳ್ಳಲಾಗಿದೆ ನ.೨೩ವರೆಗೆ ಬೃಹತ್ ಲೋಕ ಅದಾಲತ್ ನಡೆ ಯಲಿದೆ ಎಂದರು.
ನ್ಯಾಯಾಲಯದಲ್ಲಿ ಭಾಕಿ ಇರುವ ಕೇಸುಗಳ ಮಾತ್ರವಲ್ಲದೇ ಸಾರ್ವಜನಿಕ ಸಮಸ್ಯೆಗಳು ಹಾಗೂ ಇತರ ಸಮಸ್ಯೆಗಳ ಕುರಿತು ನ್ಯಾಯವಾದಿಗಳು ಮುಖಾಂತರ ಅಥವಾ ನೇರವಾಗಿ ದಾವೆಹೂಡಿ  ಪರಿಹಾರ ಪಡೆಯಬಹುದು.
ಜನತಾ ನ್ಯಾಯಾಲಯದಲ್ಲಿ ಉಭಯ ಕಕ್ಷಿದಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು, ಸೌಹಾರ್ಧ ಯುತವಾಗಿ ಪ್ರಕರಣ ಇತ್ಯರ್ಥಗೊಳಿಸಿ ಬಾಂಧವ್ಯ ಉಳಿಸಲೂ ಸಹಕರಿಲೂ ಉತ್ತೇಜಿಸುವುದು ಕಡಿಮೆ ಖರ್ಚಿನಲ್ಲಿ ಅತಿ ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶವಾಗಿದ್ದು ಕಕ್ಷಿದಾರರು ಮತ್ತು ನ್ಯಾಯವಾದಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ದೀವಾನಿ ನ್ಯಾಯಾಧೀಶರಾದ  ಕಾವೇರಿ, ಹಿರಿಯ ಶ್ರೇಣಿಯ ದಿವಾನಿ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಕಾರ್ಯದರ್ಶಿ ಬಸವರಾಜ ಚೀಗರಡ್ಡಿ, ಜಿಲ್ಲಾ ನ್ಯಾಯವಾದಿ ಸಂದ್ಯಾ ಮಾದಿನೂರ ಉಪ ಸ್ಥಿತರಿದ್ದರು.  
Please follow and like us:
error