ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ , ಸರಕಾರಿ ಪ್ರೌಢಶಾಲೆ ಕರ್ಕಿಹಳ್ಳಿ ಯಲ್ಲಿ ಸ್ವಾತಂತ್ರ್ಯ ದಿನಾಚರಣೆ

  ಸರಕಾರಿ ಪ್ರೌಢಶಾಲೆ ಕರ್ಕಿಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು  ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ನಮ್ಮ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ  ಈರಣ್ಣ ಬಡಿಗೇರ ರವರು ನೆರವೆರಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ  ಜಗದೀಶ್ ಕೆರಳ್ಳಿ, ಶ್ರೀಮತಿ ಯಲ್ಲಮ್ಮ ಗವಿಸಿದ್ದಪ್ಪ ಕುಂಬಾರ, ಶ್ರೀಮತಿ ಅಲಿಮಾ ಬೇಗಂ ಹಸ್ಮಾನ್‌ಸಾಬ ನದಾಫ್,  ಪಂಪಾಪತಿ ಮಜ್ಗಿ,   ತಿಪ್ಪಣ್ಣ ಬಜಂತ್ರಿ, ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾದ  ಮಾರ್ಕಂಡೆಪ್ಪ ವಾಲಿಕಾರ, ನಿಂಗಪ್ಪ ಕಲ್ಗಡ್ಡಿ, ಶ್ರೀಮತಿ ಗಾಳೆವ್ವ ಯಮನೂರಪ್ಪ  ಠಕಾರಿ ಶ್ರೀಮತಿ ಹೇಮಾವತಿ ಬಸವರಾಜ ಬಳಿಗಾರ, ಶ್ರೀಮತಿ ಸುಮಾ ದೇವಪ್ಪ ಕುಂಬಾರ ಭಾಗವಹಿಸಿದ್ದರು ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ  ವ್ಹಿ.ಬಿ.ಮೇಟಿ,  ಮುದಿಯಪ್ಪ ಚಟವಟಗಿ, ಗವಿಸಿದ್ದಪ್ಪ ಕುಂಬಾರ ಮಾತನಾಡಿದರು. ಮುಖ್ಯ ಶಿಕ್ಷಕರಾದ   ಸದಾನಂದ ರವರು ಅಧ್ಯಕ್ಷೀಯ ಭಾಷಣ  ಮಾಡಿದರು. ನಿರೂಪಣೆಯನ್ನು ಶಾಲೆಯ ಶಿಕ್ಷಕರಾದ  ಕೃಷ್ಣಮೂರ್ತಿ ನೆರವೆರಿಸಿದರು. 
ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ  ಸ್ವ್ವಾತಂತ್ರ್ಯ ದಿನಾಚರಣೆ 
ಅಗಷ್ಟ ೧೫: ನಗರದ ನಂದೀಶ್ವರ ಹಿರಿಯ ಪ್ರಾಥಮಿಕಶಾಲೆಯಲ್ಲಿ ಸ್ವಾತಂತ್ರ್ಯೂತ್ಸವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಂದೀಶ್ವರ ಶಿಕ್ಷಣ ಸಂಸ್ಥೆಯ ಶಿವಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಸನಗೌಡ ಪಾಟೀಲ, ವೀರಣ ಚಾಕಲಬ್ಬಿ, ಖಾಜಾ ಹುಸೇನ್, ಬಸವರಾಜ ಹುಲ್ಲೂರ, ವೀರಣ್ಣ ಅಂಗಡಿ, ಕಳಕಪ್ಪ, ರಾಮಣ್ಣ ವೇಮಲಿ, ಸಾಯಬ್ ಗೌಡ ಹಳೇಮನಿ, ಪ್ರವೀಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಾದ ರಾಣಿಚೆನ್ನಮ್ಮನ ವೇಷದಲ್ಲಿ ಕು. ಅನಿತಾ, ಕುಮಾರಿ ಹರಿಣಿ, ಅಬ್ಬಕ್ಕ ದೇವಿಯ ವೇಷದಲ್ಲಿ ಕು. ತೇಜಶ್ವಿನಿ ಬೆಲ್ಲದ, ಸಂಗೊಳ್ಳಿ ರಾಯಣ್ಣನ ವೇಷದಲ್ಲಿ ಕು. ಹನಮೇಶ, ಒಣಕೆ ಓಬವ್ವನ ವೇಷದಲ್ಲಿ ಮಂಜುಳಾ ಬಿನ್ನಾಳ, ಓಬವ್ವನ ವೇಷದಲ್ಲಿ ಕು. ತೇಜಸ್ವಿನಿ ದಾಸರ ವೇಷ ಬೂಷಣ ಸ್ಪರ್ದೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. 
೬೭ ನೇ ಸ್ವಾತಂತ್ರೋತ್ಸವ ದಿನಾಚರಣೆ ಕುರಿತು ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ತೇಜಶ್ವಿನಿ ದಾಸರ, ಕು. ಅಲ್ತಾಫ್, ಕು. ರಂಜಿತಾ ನಾಯಕ್, ಕು. ಕವಿತಾ ದಂಡಿನ್, ಕು. ಹರಿಣಿ, ಕು. ಅನಿತಾ, ಕು. ಆಶಾ, ಮಾತನಾಡಿದರು.
ವಿದ್ಯಾರ್ಥಿಗಳು ದೇಶ ಭಕ್ತಿಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿಗಳು ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು. ಹಾಗೂ ೬ ನೇತರಗತಿಯ ವಿದ್ಯಾರ್ಥಿನಿಯಾದ ಹರಣಿ ಚಾಕಲಬ್ಬಿ “ವೀರರಾಣಿ ಕಿತ್ತೂರು ಚೆನ್ನಮ್ಮ” ನಾಟಕದ ಏಕ ಪಾತ್ರಾಬಿನಯವನ್ನು ಅಮೋಘವಾಗಿ ಅಭಿನಯಿಸಿದಳು. 
ಕಾರ್ಯಕ್ರಮದಲ್ಲಿ  ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ಯ ವೇಷ ಭೂಷಣ ಸ್ಪರ್ದೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯ ಸುರೇಶ ಕುಂಬಾರ ನಿರೂಪಿಸಿದರು. ಶಿಕ್ಷಕಿ ಸುವರ್ಣಾ ಸ್ವಾಗತ & ಪುಸ್ಫಾರ್ಪಣೆ ಕಾರ್ಯಕ್ರಮ ನಡೆಸಿದರು. ಹಾಗೂ ಸುನಿತಾ ವಂದಿಸಿದರು. ೮೭೬೨೦೦೭೩೫೩

Leave a Reply