ಭೋವಿ ಅಭಿವೃದ್ಧಿ ನಿಗಮದ ಅನುಷ್ಠಾನಕ್ಕೆ ಸಚಿವ ತಂಗಡಗಿ ಸಾಕಷ್ಟು ಶ್ರಮಿಸಿದ್ದಾರೆ-ಬಸವರಾಜ್ ಭೋವಿ

 ಶ್ರಮಜೀವಿಗಳಾದ ಭೋವಿ ಸಮಾಜದ ಅಭಿವೃದ್ಧಿಗಾಗಿ ಭೋವಿ ಅಭಿವೃದ್ದಿ ನಿಗಮದ ಅನುಷ್ಠಾನಕ್ಕೆ ಸಚಿವ ಶಿವರಾಜ್ ತಂಗಡಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಭೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ಹೇಳಿದರು.
ಅವರು ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ,ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಅವರನ್ನು ಜಿಲ್ಲಾ ಭೋವಿ ಸಮಾಜದ ವತಿಯಿಂದ ಸನ್ಮಾನಿಸಿ ನಂತರ ಮಾತನಾಡಿ ಇಂದು ರಾಜ್ಯದಲ್ಲಿ ಭೋವಿ ಸಮಾಜ ಸಾಕಷ್ಠು ಹಿಂದುಳಿದ್ದು ಸಮಾಜದ ಜಾಗೃತಿಗಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಕೈಗೊಂಡು ಯಶಸ್ವೀಯಾಗಲು ಸಚಿವ ಶಿವರಾಜ್ ತಂಗಡಗಿಯವರು ಸಹ ಕಾರಣೀಭೂತರು ಹೀಗಾಗಿ ಅವರನ್ನು ನಮ್ಮ ಭೋವಿ ಸಮಾಜ ವತಿಯಿಂದ ಸಂತಸದಿಂದ ಸನ್ಮಾನಿಸುತ್ತಿದ್ದೇವೆ, ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಅಂದು ಶಾಸಕರಾಗಿದ್ದ ಸಂಸದ ಸಂಗಣ್ಣ ಕರಡಿ ೧೦ ಲಕ್ಷ ರೂ ನಿವೇಶನ ಖರೀದಿಗೆ, ಕಟ್ಟಡ ನಿರ್ಮಾಣಕ್ಕೆ ೧೦ ಲಕ್ಷ ರೂ ನೀಡಿದ್ದರು, ಆ ಸಮುದಾಯ ಭವನ ಪೂರ್ತಿಯಾಗಲು ಸಚಿವ ತಂಗಡಗಿಯವರು,ಶಾಸಕ ಕೆ.ರಾಘವೇಂದ್ರ ಹಿಟ್ನಾಳರು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಸನ್ಮಾನ ಸ್ವೀಕಾರಿಸಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ ಭೋವಿ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾರಣೀಭೂತರು ಅವರಿಗೆ ನಮ್ಮ ಸಮಾಜ ಅಭಿನಂದಿಸಬೇಕಾಗಿದೆ ಆ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದ ಅವರು ಸಮುದಾಯ ಭವನಕ್ಕೆ ಅನುದಾನ ನೀಡುವೆ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳರು ಸಹ ಅನುದಾನ ನೀಡುವರು ಎಂದರು.ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ,ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸತ್ಯಪ್ಪ ಭೋವಿ ಗೌರಿಪುರ, ಭೋವಿ ಸಮಾಜದ ಮುಖಂಡರಾದ ರೇವಣಪ್ಪ[ ಭೋವಿ, ಗಾಳೆಪ್ಪ ಭೋವಿ, ದುರ್ಗಪ್ಪ ಭೋವಿ, ಯಲಬುರ್ಗಾ ಎಪಿಎಂಸಿ ಉಪಾಧ್ಯಕ್ಷ ನಾಗಪ್ಪ ಬೋವಿ, ಯಮನೂರಪ್ಪ ಭೋವಿ, ಇಇ ಮನೋಹರ ವಡ್ಡರ್,ಹುಲ್ಲುಗಪ್ಪ ಕಟ್ಟಿಮನಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply