ಗಾಂಧಿ ಕನಸಿನ ಹಾದಿಯಲ್ಲಿ ರೂಪಕಕ್ಕೆ ಪ್ರಶಸ್ತಿ

ಕೊಪ್ಪಳ : ರಾಜ್ಯ ಮಟ್ಟದ ರ್ವಾಕ ಬಾನುಲಿ ಕಾರ್ಯಕ್ರಮಗಳ ೨೦೦೯-೧೦ ನೇ ಸಾಲಿನ ಸ್ಫರ್ಧೆಯಲ್ಲಿ ಹೊಸಪೇಟೆ ಆಕಾಶವಾಣಿ ಕೇಂದ್ರವು ಪ್ರಸ್ತುತಪಡಿಸಿದ ಸಾಕ್ಷ್ಯ ರೂಪಕ “ಗಾಂಧಿ ಕನಸಿನ ಹಾದಿಯಲ್ಲಿ” ಕಾರ್ಯಕ್ರಮ ಪ್ರಶಸ್ತಿ ಪಡೆದುಕೊಂಡಿದೆ.
ಈ ಕಾರ್ಯಕ್ರಮವನ್ನು ಹೊಸಪೇಟೆ ಆಕಾಶವಾಣಿ ಕೇಂದ್ರದ ನಿಲಯ ಕಾರ್ಯಕ್ರಮ ನಿರ್ವಾಹಕ ಡಾ: ಎನ್. ಸುಧೀಂದ್ರ ಅವರು ಪ್ರಸ್ತುತಪಡಿಸಿದ್ದರು. ಸಂಗೀತ ವಿಭಾಗದ ಸ್ಪರ್ಧೆಯಲ್ಲಿ ನಿಲಯದ ಇನ್ನೋರ್ವ ಕಾರ್ಯಕ್ರಮ ನಿರ್ವಾಹಕ ಬಳ್ಳಾರಿ ಎಂ. ರಾಘವೇಂದ್ರ ಅವರು ಪ್ರಸ್ತುತಪಡಿಸಿದ “ತನುಮನ ತಣಿಸುವ ತಮಟೆ” ಎನ್ನುವ ರೂಪಕಕ್ಕೆ ಪ್ರತಿಭಾ ಪ್ರಮಾಣ ಪತ್ರ ಲಭಿಸಿದೆ ಎಂದು ಹೊಸಪೇಟೆ ಆಕಾಶವಾಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.

Leave a Reply