ಎಣ್ಣೆ ಬದನೆಕಾಯಿ, ಪುಂಡೆಪಲ್ಯ, ಗೋದಿ ಹುಗ್ಗಿ, ಜೋಳದ ರೊಟ್ಟಿ,ವಗ್ಗರಣೆ, ಮೆಣಸಿನಕಾಯಿ ಬಜಿ,


ಗಂಗಾವತಿ: ನಗರದಲ್ಲಿ ಡಿ.9ರಿಂದ ಆರಂಭವಾಗುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಭಕ್ಷ್ಯಭೋಜನ ಉಣಬಡಿಸಲು ಮೆನು ಸಿದ್ಧವಾಗಿದೆ. ವಿಶೇಷ ಎಂದರೆ ಈ ಬಾರಿಯ ಭೋಜನ ಶೈಲಿ ಸಂಪೂರ್ಣ ಉತ್ತರ ಕರ್ನಾಟಕದ್ದು. 

ಸಮ್ಮೇಳನದ ಮೂರು ದಿನವೂ ಉತ್ತರ ಕರ್ನಾಟಕದಲ್ಲಿ ಸಿದ್ಧಪಡಿಲಾಗುವ ಖಾದ್ಯ ತಯಾರಿಸಲು ದಾಸೋಹ ಸಮಿತಿ ನಿರ್ಧರಿಸಿದೆ. ಒಟ್ಟು ನಾಲ್ಕು ಲಕ್ಷ ಜನರಿಗೆ ಊಟ ಮತ್ತು ಉಪಹಾರಕ್ಕೆ ವ್ಯವಸ್ಥೆ ಮಾಡಲು ಸಮಿತಿ ಅವಿರತ ಶ್ರಮಿಸುತ್ತಿದೆ.
ಮೊದಲ ದಿನ: ಡಿ.9ರಂದು ಉಪಹಾರಕ್ಕೆ ಸಿರಾ, ಉಪ್ಪಿಟ್ಟು, ಕಡ್ಲೆಪುಡಿ, ಉಪ್ಪಿನಕಾಯಿ. ಮಧ್ಯಾಹ್ನಕ್ಕೆ ಗೋದಿ ಹುಗ್ಗಿ, ಜೋಳದ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ, ಪುಂಡೆಪಲ್ಯ, ಶೇಂಗಾ, ಉಪ್ಪಿನಕಾಯಿ ಅನ್ನಸಾರು, ಮಜ್ಜಿಗೆ ಸಾರು. ರಾತ್ರಿ ಊಟಕ್ಕೆ ಹಪ್ಪಳ. ಉಪ್ಪಿನಕಾಯಿ, ಅನ್ನ-ಸಾಂಬಾರು, ಮಜ್ಜಿಗೆ. 
ಎರಡನೇ ದಿನ: ಉಪಹಾರಕ್ಕೆ ಮಂಡಾಳು ವಗ್ಗರಣೆ, ಮೆಣಸಿನಕಾಯಿ ಬಜಿ, ಮೊಸರು, ಅಮೀನಗಡದ ಕರದಂಟು, ಉಪ್ಪಿನಕಾಯಿ. ಊಟಕ್ಕೆ ಉದುರು ಸಜ್ಜಕ (ಸಿಹಿ ಖಾದ್ಯ), ಚಪಾತಿ, ರೊಟ್ಟಿ, ಹೆಸರುಕಾಳು, ಹಿಟ್ಟಿನ ಪಲ್ಯ, ದಾಲ್, ಗುರೆಳ್ಳು, ಚಟ್ನಿ, ಅನ್ನ ಸಾಂಬಾರು, ಮಜ್ಜಿಗೆ ಸಾರು. ರಾತ್ರಿ ಊಟಕ್ಕೆ ಹಪ್ಪಳ. ಉಪ್ಪಿನಕಾಯಿ, ಅನ್ನ ಸಾಂಬಾರು, ಅನ್ನ ಮಜ್ಜಿಗೆ. 
ಮೂರನೇ ದಿನ: ಲಾಡು, ಪೂರಿ, ಇಲಕಲ್‌ಚಟ್ನಿ, ಮಧ್ಯಾಹ್ನಕ್ಕೆ ಮಾದಲಿ (ಸಿಹಿ ಖಾದ್ಯ) ಚಪಾತಿ, ರೊಟ್ಟಿ, ಹೀರೆಕಾಯಿ, ದೊನ್ನೆ ಮೆಣಸಿನಕಾಯಿ ಪಲ್ಯ, ಶೇಂಗಾ, ಕೆಂಪುಚಟ್ನಿ, ಉಪ್ಪಿನಕಾಯಿ ಅನ್ನ ಸಾಂಬಾರು, ಮಜ್ಜಿಗೆ. ರಾತ್ರಿ ಊಟಕ್ಕೆ ಅನ್ನ ಸಾಂಬಾರು, ಮಜ್ಜಿಗೆ, ಹಪ್ಪಳ ಈ ತರದ ಮೆನು ಸಿದ್ದವಾಗಿದೆ.
ಇದರ ಹೊರತಾಗಿಯೂ ಉತ್ತರ ಕರ್ನಾಟಕದ ಮತ್ತಷ್ಟು ಸಿಹಿ ಖಾದ್ಯ, ಊಟದ ತರಹೆವಾರಿ ಪದಾರ್ಥಗಳು ಸೇರಿದರೂ ಅಚ್ಚರಿಯಿಲ್ಲ. ಸಮ್ಮೇಳನಕ್ಕೆ ಆಗಮಿಸುವ ನಾನಾ ಜಿಲ್ಲೆಯವರಿಗೆ ಉತ್ತರ ಕರ್ನಾಟಕದ ಭಕ್ಷ್ಯಭೋಜನ ನಾಲಿಗೆಗೆ ಹೊಸ ರುಚಿ ನೀಡುವ ನಿರೀಕ್ಷೆ ಸಂಘಟಕರದು
Please follow and like us:
error