ಶಾಸಕರಿಂದ ಕಾಲುವೆ ದುರಸ್ಥಿ ಕಾಮಗಾರಿ ವೀಕ್ಷಣೆ.

ಕೊಪ್ಪಳ-೨೬, ಹೊಸಳ್ಳಿ ಹತ್ತಿರ ಹೆಚ್.ಎಸ್.ಸಿ. ಕಾಲುವೆ ಒಡೆದು ೧೫೦ ಎಕರೆ ಪ್ರದೇಶದ ಅಪಾರ ಪ್ರಮಾಣದ ಬೇಳೆ ನಷ್ಠವಾಗಿದ್ದು ಈ ಕಾಲುವೆ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಕಾಲುವೆ ದುರಸ್ಥಿಮಾಡಲಾಗಿದ್ದು, ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಪದೇ ಪದೇ ಕಾಲುವೆಗಳು ಒಡೆಯದಂತೆ ಸರಿಯಾಗಿ ನಿರ್ವಹಣೆ ಮಾಡಲು ನೀರಾವರಿ ಅಧಿಕಾರಿಗಳಿಗೆ ಸೂಚಿನೆ ನೀಡಿದರು. ಈಗಾಗಲೇ ನೀರಿನ ಕೋರತೆ ಇದ್ದು ರೈತರು ನೀರಿನ ಬವಣೆ ಅನುಭವಿಸುತ್ತಿದ್ದಾರೆ. ಮುಂದೆ ಇತರ ನೀರಿನ ಸೂರಿಕೆಯಾಗದಂತೆ ಕರ್ತವ್ಯ ನಿಬಾಹಿಸಲು ಅಧಿಕಾರಿಗಳು ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಬಸವರಾಜ ಕಂಬಳಿ, ವಾಹೀದ್, ಪತ್ತಾರ ಬಸವರಾಜ, ವೆಂಕಣ್ಣ ಹೊಸಳ್ಳಿ, ಹುಲಿಯಪ್ಪ, ದಾದಾ ಖಲಂದರ್, ಮಲ್ಲಿಕಾರ್ಜುನ ಶಾಹಪುರ, ತಿಪ್ಪಣ್ಣ ಕೋರಿ, ಫಕೀರಪ್ಪ ಪೂಜಾರ, ನಿಂಗಜ್ಜ ಚೌದ್ರಿ, ಹನುಮಂತ ಕುರಿ, ಬಸವರಾಜ ಕುರಿ, ನಾಗರಾಜ ಹಳ್ಳಿಗುಡಿ, ಇನ್ನೂ ಅನೇಕ ಹೊಸಳ್ಳಿ ಗ್ರಾಮದವರು ಉಪಸ್ಥಿತರಿದ್ದರು.
Please follow and like us:
error